ಎಡಿಜಿಪಿ ಅಲೋಕ್ ಕುಮಾರ್ ಗೆ ಸಾರ್ವಜನಿಕರಿಂದ ಅಹವಾಲು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.22: ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ನಿನ್ನೆ ಸಂಜೆ ಎಸ್ಪಿ ಕಚೇರಿಗೆ ಭೇಟಿ ನೀಡಿದ್ದರು, ಈ ಸಂದರ್ಭದಲ್ಲಿ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಅಹವಾಲು  ಸ್ವೀಕರಾದ ಸಭೆಯಲ್ಲಿ ನಗರದಲ್ಲಿ ಪೊಲೀಸ್‌ ಸಿಬ್ಬಂದಿ ಹೆಚ್ಚಿಸುವಂತೆ ಅಂದ್ರಾಳು ಸೇವಾ  ಸಂಘದಿಂದ ವೆಂಕಟರಾಮರೆಡ್ಡಿ ಮನವಿ ಸಲ್ಲಿಸಿದರು.
ನಗರದ ಕೆಲ ಠಾಣೆಗಳಲ್ಲಿ ನೊಂದವರಿಗೆ ನ್ಯಾಯ ದೊರಕುತ್ತಿಲ್ಲ ಎಂದು ಡಿವಿಕ ಫೌಂಡೇಶನ್ ಮನವಿ ಸಲ್ಲಿಸಿತು.
ಹೊರವಲಯದ ಬಡಾವಣೆಗಳಲ್ಲಿ ಕುಡುಕರ ಕಾಟ ತಪ್ಪಿಸಲು ಲೇಔಟ್ ಮಾಲೀಕರಿಗೆ ಜವಾಬ್ದಾರಿ ವಹಿಸುವಂತೆ ಒತ್ತಾಯಿಸಲಾಯಿತು.ಎರಡು ತಿಂಗಳಿನಿಂದ ನೀಡಿದ ದೂರಿಗೆ ಮಹಿಳಾ ಠಾಣೆಯಲ್ಲಿ ನ್ಯಾಯ ದೊರಕಿಲ್ಲ. ಎಂದು ಪ್ರತಿಭಾ ಎಂಬ ಮಹಿಳೆಯೊಬ್ಬರು ದೂರು ನೀಡಿದರು. ಕೌಲ್ ಬಜಾರ್  ಮೊಲ ಗೇಟಿನ ಬಳಿಯ ರೈಲ್ವೇ  ಹೊಸ  ಓವರ್ ಬ್ರಿಜ್ ನಲ್ಲಿ ಹಲವು ಅಪಘಾತಗಳು ಸಂಭವಿಸಿವೆ, ಅದಕ್ಕೆ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದರು
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅಲೋಕ್ ಕುಮಾರ್ ಅವರು ಪ್ರತಿ ತಿಂಗಳ ಎರಡನೇ ಭಾನುವಾರ ದಲಿತ ದಿನಾಚರಣೆ ಮಾಡುವಂತೆ ಎಸಿಗೆ ಆದೇಶ ನೀಡಿದರು.
ಎಸ್ಪಿ ರಂಜಿತ ಕುಮಾರ್ ಬಂಡಾರು ಬಂಡಾರು ಮೊದಲಾದ ಆಧಿಕಾರಿಗಳು ಇದ್ದರು.