ಎಡದಂಡೆ ಕಾಲುವೆಗೆ ನೀರು ವಿತರಿಸಲು ವೀರನಗೌಡ ಒತ್ತಾಯ

ರಾಯಚೂರು, ಜು.೨೫- ಕೆ.ಜಿ.ಆವಾರ್ಡ್ ಪ್ರಕಾರ ಎಡದಂಡೆ ಕಾಲುವೆಯಲ್ಲಿ ನೀರು ವಿತರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಅಧ್ಯಕ್ಷ ಡಿ.ವೀರನಗೌಡ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ನೀರಿನ ಮಾಪನೆಗಾಗಿ ಅಳವಡಿಸಿದ ಯಂತ್ರಗಳ ಮಾಪನದಂತೆ ಗೇಜ್ ಪುಸ್ತಕದಲ್ಲಿ ನೋಂದಾಯಿಸಬೇಕು. ನೀರು ವಿತರಣೆಗಾಗಿ ಇರುವ ಇಂಜನೀಯರ್‌ಗಳಲ್ಲಿ ವರ್ಗಾವಣೆಯಾದ ಅಧಿಕಾರಿಗಳನ್ನು ಜಾಗೆಯಲ್ಲಿ ಶೀಘ್ರವೇ ಬೇರೆಯವರನ್ನು ನೇಮಿಸಬೇಕು. ಗ್ಯಾಂಗ್ ಮನ್‌ಗಳ ಬದಲಾಗಿ ಮ್ಯಾನ್‌ಪವರ್ ಏಜೆನ್ಸಿ ರದ್ದು ಮಾಡಿ ಗ್ಯಾಂಗ್‌ಮ್ಯಾನ್‌ಗಳನ್ನು ಮರುನೇಮಕ ಮಾಡಿಕೊಳ್ಳಬೇಕು. ತಾತ್ಕಾಲಿಕವಾಗಿ ಸ್ಥಳೀಯ ಮ್ಯಾನ್ ಪವರ್ ಏಜೆನ್ಸಿಗಳಿಗೆ ಗ್ಯಾಂಗ್‌ಮ್ಯಾನ್‌ಗಳನ್ನು ಒದಗಿಸುವ ಸೌಕರ್ಯ ಒದಗಿಸಬೇಕು. ಮೇಲ್ಭಾಗದಲ್ಲಿ ೦ ದಿಂದ ೪೭ಮೈಲ್ ವರೆಗೆ ಎಡದಂಡ ನಾಲೆ ಎಡಭಾಗದ ನಿರು ಕಳುವು ಮಾಡುವ ನೀರಿನ ಮಾಫಿಯಾವನ್ನು ಗುರುತಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.
ಮೇಲಿನ ವಿಷಯಗಳನ್ನು ಚರ್ಚಿಸಲು ಶೀಘ್ರದಲ್ಲಿ ಸಂಬಂದಪ್ಪಟ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ಏರ್ಪಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಒಂದು ವಾರದಲ್ಲಿ ಸಕಾರಾತ್ಮಕವಾಗಿ ಜಿಲ್ಲಾಡಳಿತ ಸ್ಪಂದಿಸಿದ್ದಲ್ಲಿ ಜನಪರ ಹೋರಾಟದ ಜೊತೆಗೆ ಕಾನೂನಾತ್ಮಕ ಹೋರಾಟ ನಡೆಸಲು ಮುಂದಾಗುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ವಿ. ವೀರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.