ಎಡದಂಡೆ ಉಪ ಕಾಲುವೆ ಬಳಿ ರೈತರು ಕಾವಲು

ಕಾರಟಗಿ:ಏ:16: ತುಂಗಭದ್ರಾ ಎಡದಂಡೆ 31ನೇ ವಿತರಣಾ ಕಾಲುವೆಯ ಕೂನೆ ಭಾಗದ ರೈತರು ಎಂಟು ದಿನಗಳ ಕಾಲ ಸರತಿಯಂತೆ ಹಗಲು ರಾತ್ರಿ ಜಾಕ್ ವೇಲ್ ಬಳಿ ಕಾವಲು ಕಾಯತ್ತಿದ್ದಾರೆ,
ಬೂದಗುಂಪಾ ತಿಮ್ಮಾಪುರ ಹಾಲಸಮುದ್ರ.
ಯರಡಣಿ. ಈಳಿಗಾನೂರು ರೈತರಿಂದ ನೀರಿಗಾಗಿ ಸರತಿಯಂತೆ ಹಗಲು-ರಾತ್ರಿ ಎಡದಂಡೆ ಉಪ ಕಾಲುವೆ ಬಳಿ ಕಾವಲು ಕಾಯತ್ತಿದ್ದಾರೆ,
ರೈತರ ಬತ್ತದ ಬೆಳೆಗೆ ನೀರಿನ ಕೊರೆತೆಯಾಗಿದ್ದರಿಂದ
ಏಪ್ರಿಲ್ 25 ರವರಿಗೆ ನೀರಿನ ಅವಶ್ಯಕತೆ ಇದ್ದು ಅಲ್ಲಿಯವರೆಗೆ ಉಪ ಕಾಲುವೆಯ ಜಾಕ್ ವೆಲ್ ಬಂದ್ ಮಾಡದೆ ನೀರು ಬಿಡಬೇಕೆಂದು ರೈತರ ತಿಳಿಸಿದ್ದಾರೆ,
ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿದೆ ರೈತರ ಪಸಲು ಕೊನೆಯ ಹಂತದ ಕೊಯ್ಲಿಗೆ ಬಂದಿದೆ ಇಂತಹ ಸಮಯದಲ್ಲಿ ಉಪ ಕಾಲುವೆಯ ಜಾಕ್ ವೆಲ್ (ಗೇಟ್) ಬಂದ ಮಾಡಿದರೆ ರೈತರಿಗೆ ತೊಂದೆರೆ ಆಗುತ್ತದೆ,
ಮಸ್ಕಿ ಉಪ ಚುನಾವಣೆ ಇರವುದ್ದರಿಂದ ಮೇ 17 ರವರಗೆ ಎಡದಂಡೆ ಕಾಲುವೆಗೆ ನೀರು ಹರಿಸುವ ಮಾಹಿತಿ ಇದೆ, ಆದರೆ ಇಲ್ಲಿನ ಉಪ ಕಾಲುವೆಯ ಜಾಕ್ ವೆಲ್ ಬಂದು ಮಾಡಿ ಮುಖ್ಯ ಕಾಲುವೆ ಹರಿಸಲು ಸೂಕ್ತವಲ್ಲ ಇನ್ನು ಹತ್ತು ದಿನಗಳ ಕಾಲ ಉಪ ಕಾಲುವೆಗೆ ನೀರು ಬಿಡಬೇಕೆಂದು ರೈತರು ಒತ್ತಾಯಿಸಿ ಕಾಲುವೆ ಬಳಿ ಕಾವಲು ಕಾಯತ್ತಿದ್ದೇವೆಂದು ರೈತ ಮುಖಂಡ ಶರಣೇಗೌಡ ಮಾಲಿ ಪಾಟೀಲ್ ತಿಳಿಸಿದ್ದಾರೆ,
ಈ ಸಂದರ್ಭದಲ್ಲಿ ಬೂದಗುಂಪ ತಿಮ್ಮಾಪುರ.ಹಾಲಸಮುದ್ರ. ಈಳಿಗ ನೂರು, ಯರಡೋಣ ಗ್ರಾಮದ ರೈತರು ಭಾಗಿಯಾಗಿದ್ದರು,