ಎಡಗೈ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಲು
 ಕಾಂಗ್ರೆಸ್  ಮುಖಂಡರಿಗೆ ಮನವಿ


(ಸಂಜೆವಾಣಿ ವಾರ್ತೆ)   
ಬಳ್ಳಾರಿ, ಮಾ.27: ನಾಡಿದ್ದು ನಡೆಯುವ ಇಲ್ಲಿನ ಮಹಾ ನಗರ ಪಾಲಿಕೆ ಮೇಯರ್ ಸ್ಥಾನವನ್ನು ಎಡಗೈ ಸಮುದಾಯದವರಿಗೆ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಮನವಿ‌ ಮಾಡಿದೆ ಎಂದು ಪಕ್ಷಚ ವಕ್ತಾರ ವೆಂಕಟೇಶ್ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಪಿಸಿಸಿ  ಅಧ್ಯಕ್ಷ ಡಿ.ಕೆ.ಶಿವಕುಮಾರ್ , ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,  ರಾಜ್ಯ ಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಮತ್ತು ಇತರ  ನಾಯಕರು, ಜಿಲ್ಲೆಯ ಶಾಸಕರು, ಸಂಸದರನ್ನು ಮೇಯರ್ ಆಕಾಂಕ್ಷಿ ಉಮದೇವಿ, ಮುಖಂಡ ಶಿವರಾಜ್ ಹೆಗಡೆ ಮೊದಲಾದವರೊಂದಿಗೆ ಭೇಟಿ ಮಾಡಿ. ಎಡಗೈ ಸಮುದಾಯದ ಉಮಾದೇವಿ ಶಿವರಾಜ್ ಅವರಿಗೆ  ಮೇಯರ್ ಸ್ಥಾನ ಕೊಡಬೇಕು, ಇವರು ಎರಡನೇ ಬಾರಿಗೆ ಸದಸ್ಯರಾಗಿದ್ದಾರೆ.  ಸಮಾಜಕ್ಕೆ ನ್ಯಾಯವನ್ನು ಪರಿಗಣಿಸಿ ಇವರನ್ನು ಮೇಯರ್ ಮಾಡಿದರೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿರುವ 7ಲಕ್ಷ ಜನ ಎಡಗೈ ಸಮುದಾಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಕೊಡುವುದರ ಮೂಲಕ 10 ಕ್ಷೇತ್ರಗಳಲ್ಲಿ ಗೆಲುವನ್ನು ತಂದುಕೊಡಲಿಕ್ಕೆ ಕಾರಣರಾಗುತ್ತಾರೆ. 
ಇಲ್ಲಿಯವರೆಗೂ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಎಡಗೈ ಸಮುದಾಯದವರಿಗೆ ಮೇಯರ್ ಸ್ಥಾನವನ್ನು ಕೊಟ್ಟಿಲ್ಲ ಆದುದರಿಂದ ಈ ಬಾರಿ ಆ ಅನ್ಯಾಯವನ್ನು ಸರಿಪಡಿಸಬೇಕೆಂದು ಮನವಿ ಮಾಡಿರುವುದಾಗಿ ಹೇಳಿದ್ದಾರೆ.