ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಳ

ಮುಂಬೈ, ಡಿ. ೭- ಎಟಿಎಂ ವಿತ್ ಡ್ರಾ ಶುಲ್ಕವನ್ನು ಜ. ೧ ರಿಂದ ಜಾರಿಗೆ ಬರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿಸಿದೆ. ಇದುವರೆಗೆ ೨೦ ರೂ. ಶುಲ್ಕ ವಿಧಿಸಲಾಗಿತ್ತಿತ್ತು. ಈಗ ಒಂದು ರೂ. ಹೆಚ್ಚಿಸಲಾಗಿದೆ.
ಇದುವರೆಗೆ ಖಾತೆದಾರರು ಐದು ಬಾರಿ ಉಚಿತವಾಗಿ ಹಣ ವಿತ್ ಡ್ರಾ ಮಾಡಲು ಅವಕಾಶವಿತ್ತು. ಬಳಿಕ ೨೦ ರೂ. ಶುಲ್ಕ ವಿಧಿಸಲಾಗುತ್ತಿತ್ತು.
ಮೆಟ್ರೋ ನಗರದಲ್ಲಿ ಇತರ ಬ್ಯಾಂಕ್ ಎಟಿಎಂ ನಿಂದ ಮೂರು ಬಾರಿ ಉಚಿತವಾಗಿ ಹಣ ವಿತ್ ಡ್ರಾ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಮೆಟ್ರೋ ಹೊರತಾದ ಇತರ ನಗರಗಳಲ್ಲಿ ಐದು ಬಾರಿ ಈ ಉಚಿತ ಸೌಲಭ್ಯ ಪಡೆಯಬಹುದಾಗಿದೆ.