ಎಟಿಎಂ ಕಳ್ಳತನಕ್ಕೆ ವಿಫಲಯತ್ನ

ತಿ.ನರಸೀಪುರ.ಡಿ.29 -ಪಟ್ಟಣದ ವಿದ್ಯೋದಯ ಕಾಲೇಜು ಬಳಿ ಇರುವ ಕೆನರಾ ಬ್ಯಾಂಕ್ ಎಟಿಎಂ ನಲ್ಲಿ ಕಳ್ಳತನದ ವಿಫಲಯತ್ನ ನಡೆದಿದೆ
ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಎರಡು ಎಟಿಎಂ ಮಿಷನ್ ಗಳಿದ್ದು ಅದರಲ್ಲಿ ಒಂದು ಮಿಷನ್ ನನ್ನು ರಾತ್ರಿ ವೇಳೆ ಒಡೆದಿರುವ ಕಳ್ಳರು ಅದರಲ್ಲಿದ್ದ ಹಣ ದೋಚಲು ವಿಫಲ ಯತ್ನ ನಡೆಸಿದ್ದಾರೆ.ಈ ವೇಳೆ ದುಷ್ಕರ್ಮಿಗಳು ಎಟಿಎಂ ನಲ್ಲಿರುವ ಸಿಸಿ ಟಿವಿ ಗೆ ಪೇಪರ್ ಮುಚ್ಚಿ ಏನು ಕಾಣದಂತೆ ಮರೆ ಮಾಡಿದ್ದಾರೆ.
ಎಟಿಎಂ ಯಂತ್ರ ಪರಿಶೀಲನೆ ಮಾಡಲಾಗಿ ಯಾವುದೇ ಹಣ ಕಳ್ಳತನ ವಾಗಿಲ್ಲದಿರುವುದು ಕಂಡು ಬಂದಿದೆ.
ಈ ಸಂಬಂಧ ಎಟಿಎಂ ನ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಎಲೆಕ್ಟ್ರಾನಿಕ್ ಪೇಮೆಂಟ್ ಅಂಡ್ ಸರ್ವೀಸ್ ನ ಸಾಯಿ ಕೃಷ್ಣ ನೀಡಿದ ದೂರಿನನ್ನಯ ಕೇಸು ದಾಖಲಿಸಿಕೊಂಡಿರುವ ಪಟ್ಟಣ ಠಾಣೆಯ ಪಿಎಸ್‍ಐ ಎಚ್.ಡಿ.ಮಂಜಪ್ಪ ತನಿಖೆ ಕೈಗೊಂಡಿದ್ದಾರೆ.