ಎಟಿಎಂನಲ್ಲಿ 16 ಲಕ್ಷ ಲೂಟಿ ಮಾಡಿದ್ದ ಖದೀಮರ ಬಂಧನ

ವಿಜಯಪುರ, ಡಿ.5-ಸೆಕ್ಯೂರಿಟಿ ಸಿಬ್ಬಂದಿ ಎಟಿಎಂ ಮಶೀನ್‍ಗೆ ಲಕ್ಷ ಲಕ್ಷ ಹಣ ತುಂಬಿಸಿ ಹೋಗಿದ್ರು, ಸಾಕಷ್ಟು ಬಿಗಿ ಭದ್ರತೆಯಿಂದ ಲಾಕ್ ಮಾಡಿದ್ರೂ ಸಹ ನಕಲಿ ಕೀ ಬಳಸಿ, ಕೊನೆಗೆ ಎಟಿಎಂ ಮಶೀನ್ ಪಾಸವರ್ಡ್ ಬಳಸಿ ಯಾವುದೇ ಸುಳಿವು ಸಹ ಬಿಡದೆ ಅತ್ಯಂತ ಚಾಣಾಕ್ಷತೆಯಿಂದ ಕಳ್ಳತನ ಮಾಡಲಾಗಿತ್ತು. ಪಕ್ಕಾ ಪ್ಲಾನ್ ಪ್ರಕಾರ ನಡೆದ ಈ ಎಟಿಎಂ ಲೂಟಿಯ ವೇಳೆ ಬರೋಬ್ಬರಿ 16 ಲಕ್ಷ ರೂಪಾಯಿ ದೋಚಿದ್ದ ಖದೀಮರು ಇದೀಗ ಖಾಕಿ ಬಲೆಗೆ ಬಿದ್ದಿದ್ದಾರೆ. ತನಿಖೆ ನಡೆಸಿದ ಪೆÇಲೀಸರಿಗೆ ಬ್ಯಾಂಕ್ ಕ್ಯಾಶಿಯರ್, ಆಕೆಯ ಪ್ರಿಯಕರ ಹಾಗೂ ಸಿಪಾಯಿ ಪಾಲುದಾರರಾಗುವ ಮೂಲಕ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಬೆಳಕಿಗೆ ಬಂದಿತ್ತು.

ಪಾಸವರ್ಡ್ ಬಳಸಿ ಎಟಿಎಂ ನಿಂದ 16 ಲಕ್ಷ ಲೂಟಿ. ಬ್ಯಾಂಕ್ ಕ್ಯಾಶಿಯರ್ ಹಾಗೂ ಸಿಪಾಯಿಏ ಭಾಗಿ. ಹೌದು ನವ್ಹೆಂಬರ್ 18 ರ ರಾತ್ರಿ ಮುದ್ದೇಬಿಹಾಳದ ಹುಡ್ಕೋ ಕಾಲೋನಿಯಲ್ಲಿನ ಯೂನಿಯನ್ ಬ್ಯಾಂಕ್ ಎಟಿಎಂ ಕಳ್ಳತನ ಮಾಡಲಾಗಿತ್ತು. ರಾತ್ರಿ ವೇಳೆ ಬಂದ್ ಇರುತ್ತಿದ್ದ ಎಟಿಎಂ ಮಶೀನ್ ಬೀಗ ಮುರಿದು ಪಾಸವರ್ಡ್ ಹಾಕಿ 16ಲಕ್ಷ ರೂಪಾಯಿ ಹಣ ದೋಚಲಾಗಿತ್ತು. ಈ ಕುರಿತು ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಮುದ್ದೇಬಿಹಾಳ ಠಾಣೆಗೆ ದೂರು ನೀಡಿದರು.

ಸಿಸಿ ಟಿವಿ ವಿಡಿಯೋ ಆಗಲಿ ಅಥವಾ ಯಾವುದೇ ಸಾಕ್ಷಿ ಇಲ್ಲದಿದ್ರೂ ಪ್ರಕರಣದ ಹಿಂದೆ ಬಿದ್ದ ಪೆÇಲೀಸರು ಚುರುಕಿನ ತನಿಖೆ ನಡೆಸಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.ಇಡಿ ಮುದ್ದೇಬಿಹಾಳದಲ್ಲಿನ ಸಿಸಿ ಟಿವಿಗಳನ್ನು ಪರಿಶೀಲಿಸಿದ ಪೆÇಲೀಸರಿಗೆ ಅಂದು ರಾತ್ರಿ ಒಂದು ಸ್ವಿಫ್ಟ್ ಕಾರು ಹಾಗೂ ಕೆಲವು ವ್ಯಕ್ತಿಗಳು ಅನುಮಾನಾಸ್ಪದವಾಗಿ ತಿರುಗಾಡಿರುವುದು ಕೆಲವು ಸಿಸಿ ಕ್ಯಾಮೆರಾಗಳಲ್ಲಿ ಕಂಡು ಬಂದಿತ್ತು.

ಪೆÇಲೀಸರ ತನಿಖೆ ವೇಳೆ ಯೂನಿಯನ್ ಬ್ಯಾಂಕ್ ಕ್ಯಾಶಿಯರ್ ಮಿಸ್ಮಿತಾ ಶರಾಭಿ ಹಾಗೂ ಸಿಪಾಯಿ ವಿಠ್ಠಲ್ ಮಂಗಳೂರ ಭಾಗಿಯಾಗಿರುವುದು ಗೊತ್ತಾಗಿತ್ತು. ಅವರನ್ನು ಹಿಡಿದು ವಿಚಾರಿಸಿದ ಪೆÇಲೀಸರಿಗೆ ಭಯಾನಕ ಸತ್ಯ ಗೊತ್ತಾಗಿತ್ತು. ಕ್ಯಾಶಿಯರ್ ಆಗಿದ್ದ ಮಿಸ್ಮಿತಾ ತಾನು ಅನೈತಿಕ ಸಂಭಂಧ ಹೊಂದಿದ್ದ ಮಂಜುನಾಥ ಬಿನ್ನಾಳಮಠ ಎಂಬಾತನಿಗೆ ಎಟಿಎಂ ಮಶೀನ್ ಪಾಸವರ್ಡ್ ನೀಡಿದ್ದಳು, ಇತ್ತ ಸಿಪಾಯಿ ವಿಠ್ಠಲ ಎಟಿಎಂ ಮಶೀನ್ ನ ನಕಲಿ ಕೀ ಕೊಟ್ಟಿದ್ದ. ಇವರಿಬ್ಬರ ಸಹಾಯ ಪಡೆದು ಮಂಜುನಾಥ ತನ್ನ ನಾಲ್ವರು ಸಹಚರರೊಂದಿಗೆ ಕಾರಿನಲ್ಲಿ ಬಂದು ಎಟಿಎಂ ಲೂಟಿ ಮಾಡಿದ್ದ.

ಕ್ಯಾಶಿಯರ್ ಮಿಸ್ಮಿತಾಳೊಂದಿಗೆ ಅನೈತಿಕ ಸಂಭಂಧ ಹೊಂದಿದ್ದ ಮುದ್ದೇಬಿಹಾಳದ ಮಂಜುನಾಥ ಬಿನ್ನಾಳಮಠ ಸುಲಭವಾಗಿ ಹಣ ಮಾಡುವ ಯೋಚನೆ ಮಾಡಿದ್ದ. ಇದಕ್ಕೆ ಸಾಥ್ ನೀಡಿದ ಮಿಸ್ಮಿತಾ ತಮ್ಮದೇ ಬ್ಯಾಂಕ್ ಎಟಿಎಂ ಮಶೀನ್ ಲೂಟಿ ಮಾಡುವ ಪ್ಲಾನ್ ಕೊಟ್ಟಿದ್ದಳು. ಅದರಂತೆ ಯಶಸ್ವಿಯಾಗಿ ಎಟಿಎಂ ಲೂಟಿ ಮಾಡಿದ್ದ ಮಂಜುನಾಥ, ಬಸವರಾಜ, ಸುರೇಶ, ಮುತ್ತು, ನಾಗರಾಜ, ವಿಠ್ಠಲ, ಮಿಸ್ಮಿತಾ ಈ ಏಳು ಆರೋಪಿಗಳು ಇದೀಗ ಅಂದರ್ ಆಗಿದ್ದಾರೆ. ಬಂಧಿತರಿಂದ 13 ಲಕ್ಷ ಹಣ, ಎಟಿಎಂ ಮಶೀನ್ ನಿಂದ ದೋಚಲಾಗಿದ್ದ, ಯಂತ್ರದ ಸಲಕರಣೆಗಳು, ಒಂದು ಸ್ವಿಫ್ಟ್ ಕಾರು, 5 ಸ್ಮಾರ್ಟ್ ಫೆÇೀನ್ ಗಳು ಸೇರಿ ಒಟ್ಟು 18 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಅನೈತಿಕ ಸಂಭಂಧ ಹೊಂದಿದ್ದ ಕ್ಯಾಶಿಯರ್ ಮಿಸ್ಮಿತಾ ಕ್ರಿಮಿನಲ್ ಪ್ಲಾನ್ ಮಾಡಿ ತನ್ನ ಪ್ರಿಯಕರನಿಂದಲೇ ಇಷ್ಟೆಲ್ಲ ಕುಕೃತ್ಯ ಮಾಡಿಸಿದ್ದು, ಬ್ಯಾಂಕ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ…ಸಾಕ್ಷಿಗಳು ಇಲ್ಲದಿದ್ರೂ ತ್ವರಿತಗತಿಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ, ಕಳುವಾಗಿದ್ದ ಸಾರ್ವಜನಿಕರ ಹಣವನ್ನು ವಶಕ್ಕೆ ಪಡೆದ ಮುದ್ದೇಬಿಹಾಳ ಠಾಣೆ ಪೆÇಲೀಸರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಅಧಿಕಾರಿ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿದ ಎಸ್.ಪಿ ಅವರು ಸಹ ಪ್ರಶಂಸೆಯನ್ನು ನೀಡಿದ್ದಾರೆ.