ಎಜ್ಯುಕೇಶನ್ ಐಕಾನ್-2023 ಪ್ರಶಸ್ತಿಗೆ ಶಿವಲಿಂಗ ಹೇಡೆ ಆಯ್ಕೆ

ಬೀದರ :ಸೆ.5: ಶ್ರೀ ನಾನಕ್ ಝೀರಾ ಸಾಹಿಬ್ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿರುವ ‘ಕಲ್ಯಾಣ ಕರ್ನಾಟಕ ಟೀಚರ್ಸ್ ಎಜ್ಯುಕೇಶನ್ ಐಕಾನ್ ಅವಾರ್ಡ್ – 2023’ ಪ್ರಶಸ್ತಿಗೆ ತಾಲೂಕಿನ ಸಂತಪೂರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಶಿವಲಿಂಗ ಹೇಡೆ ಆಯ್ಕೆಯಾಗಿದ್ದಾರೆ.

ಈ ಪ್ರತಿಷ್ಠಿತ ಪ್ರಶಸ್ತಿಯು ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ ತಜ್ಞರ ಗಮನಾರ್ಹ ಸಾಧನೆ ಪ್ರಯತ್ನಗಳನ್ನು ಗುರುತಿಸಿ ನೀಡಲಾಗುತ್ತದೆ. ಶಿಕ್ಷಣ ಮತ್ತು ಸಮಾಜಕ್ಕೆ ಗಮನಾರ್ಹ ಕೊಡುಗೆಗಳ ಜೊತೆಗೆ ಬೋಧನೆ, ಸಂಶೋಧನೆ ಮತ್ತು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿಸುವ ಅಸಾಧಾರಣ ಅಧ್ಯಾಪಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಡಾ.ಬಲಬೀರ್ ಸಿಂಗ್ ಹಾಗೂ ಕಾರ್ಯಕ್ರಮ ಸಂಯೋಜಕರಾದ ಪೆÇ್ರೀ. ಜ್ಯೋತಿ ಐನಾಪೂರ ಅವರು ತಿಳಿಸಿದ್ದಾರೆ. ಬೀದರಿನ ಝೀರಾ ಕನ್ವೆನ್ಷನ್ ಹಾಲ್‍ನಲ್ಲಿ ಸೆಪ್ಟೆಂಬರ್ 5, 2023 ಶಿಕ್ಷಕರ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.