ಎಜು ಏಷ್ಯಾ ಶಾಲೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.೨೩:: ಮಂಗಳೂರಿನ ಹೆಸರಾಂತ ಕೆ. ಎಸ್. ಹೆಗ್ಡೆ ಆಸ್ಪತ್ರೆ ಮತ್ತು ಕೆಪಿಆರ್ ಶ್ರೀ ರಕ್ಷಾ ಟ್ರಸ್ಟ್ ದಾವಣಗೆರೆ, ಎಜು ಏಷ್ಯಾ ನಮೂಹ ಶಾಲೆ ದಾವಣಗೆರೆ, ಇನ್ಫೋ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಹಾಗೂ ಖುಷಿ ಎಂಟರ್ಪ್ರೈಸಸ್ ದಾವಣಗೆರೆ ಇವರ ಜಂಟಿ ಆಶ್ರಯದಲ್ಲಿ ದಿ. ಲೆಫ್ಟಿನೆಂಟ್ ಸಂದೇಶ್ ಕುಮಾರ್ ಅವರ ಸ್ಮರಣಾರ್ಥವಾಗಿ ಈಚೆಗೆ ಎಜು ಏಷ್ಯಾ ಕಾಂಟಿನೆಂಟಲ್ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಶಿಬಿರದಲ್ಲಿ ನೂರಾರು ರೋಗಿಗಳಿಗೆ ಉಚಿತ ತಪಾಸಣೆ ಮಾಡಿ ಔಷಧಿಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಎಜು ಏಷ್ಯಾ ಸಮೂಹ ಶಾಲೆಗಳ ಅಧ್ಯಕ್ಷರಾದ ಮಾಗನಹಳ್ಳಿ ನೀಲಮ್ಮ ಹಾಗೂ ಕಾರ್ಯದರ್ಶಿ ಸಂತೋಷ್ ಕುಮಾರ್, ಶಾಲೆಯ ನಿರ್ದೇಶಕ ಮಂಡಳಿಯ ಚಂದ್ರಶೇಖರ್, ಶ್ರೀರಕ್ಷಾ ಟ್ರಸ್ಟ್ ಅಧ್ಯಕ್ಷ ರವಿ, ಮಂಗಳೂರಿನ ಪ್ರಸಿದ್ದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ನುರಿತ ವೈದ್ಯರುಗಳಾದ, ಶಸ್ತ್ರಚಿಕಿತ್ಸೆಯ ತಜ್ಞ ಡಾ. ಅಭಿಜಿತ್ ಎಸ್. ಶೆಟ್ಟಿ, ಡಾ. ಅನುಪ ಹೆಗಡೆ, ಶಾಲೆಯ ಪ್ರಾಂಶುಪಾಲರಾದ ವಾಣಿ ಗುಜ್ಜರ್, ಮುಖ್ಯೋಪಾಧ್ಯಾಯನಿ ಜಿ.ಡಿ. ಗಾಯತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.