ಕೋಲಾರ,ಜೂ,೨:ಕೋಲಾರ ನಗರದ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆ ಮತ್ತು ಓವಮ್ ಹಾಸ್ಪಿಟಲ್, ಹೊಸಕೋಟೆ ಸಹಯೋಗದಲ್ಲಿ ಎಬಿಜಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಬ್ಲಡ್ ಗ್ಯಾಸ್ ಸಿಂಪೋಯಿಸಮ್, ಇದರ ಉದ್ದೇಶ ನರಸಿಂಹರಾಜ ಆಸ್ಪತ್ರೆಯಲ್ಲಿ ವೈದ್ಯಕೀಯ ಕೋರ್ಸನ್ನು ಅಭ್ಯಾಸ ಮಾಡುತ್ತಿರುವ ಪಿಜಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು ಮತ್ತು ಸಾರ್ವಜನಿಕರಿಗೂ ಕೂಡ ಇದರಿಂದ ಒಂದಷ್ಟು ಮಾಹಿತಿಗಳು ಸಿಗುವಂತಾಗುವುದು. ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಗುಣಮಟ್ಟವನ್ನು ಹೆಚ್ಚಿಸುವ ಸದ್ದುದ್ದೇಶ ಇದರಲ್ಲಿ ಅಡಕವಾಗಿದೆ.
ಜಿಲ್ಲಾ ಐಎಪಿ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಎಬಿಜಿಯ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸುವಲ್ಲಿ ನೆರವಾಯಿತು.
ಕಾರ್ಯಕ್ರಮದಲ್ಲಿ ಡಾ.ಬಾಲಸುಂದರ್, ಡಾ.ವೈ.ಸಿ.ಬೀರೇಗೌಡ, ಓವಮ್ ಆಸ್ಪತ್ರೆ ಹೊಸಕೋಟೆಯ ಡಾ.ಅಭಿಷೇಕ್, ಡಾ.ಸಂದೀಪ್ ಡಾ.ಶ್ರೀನಾಥ್, ಡಾ. ಆಶಾ ಮುಂತಾದ ತಜ್ಞ ವೈದ್ಯರು ಸಹ ಭಾಗಿಯಾಗಿದ್ದರು.