ಎಚ್ – 1ಬಿ ವೀಸಾ ನಿರ್ಬಂಧ ಸಡಿಲ

A supporter (C) holds a national flag of India as she attends a watch party of US President-elect Joe Biden and Vice President-elect Kamala Harris as they deliver remarks in Miami on November 7, 2020, after they were declared the winners of the presidential election. (Photo by CHANDAN KHANNA / AFP)

ವಾಷಿಂಗ್ಟನ್, ನ. ೮- ಭಾರತ ಸೇರಿದಂತೆ, ವಿವಿಧ ದೇಶಗಳಿಂದ ಉದ್ಯೋಗ ಅರಸಿ ಅಮೆರಿಕಾಕ್ಕೆ ಬರುತ್ತಿದ್ದ ಉದ್ಯೋಗಿಗಳ ಗರಿಷ್ಟ ಪ್ರಮಾಣದ ವೀಸಾ ತೆಗೆದುಹಾಕುವ ಜೊತೆಗೆ ಹೆಚ್ – ೧ಬಿ ವೀಸಾ ಸೇರಿದಂತೆ, ಇನ್ನಿತರೆ ಉನ್ನತ ಕೌಶಲ್ಯ ವೀಸಾಗಳ ಸಂಖ್ಯೆಯನ್ನು ಹೆಚ್ಚಳ ಮಾಡಲು ಅಮೆರಿಕಾದ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಮುಂದಾಗಿದ್ದಾರೆ.
ಇದರ ಜೊತೆಗೆ ಟ್ರಂಪ್ ಆಡಳಿತದಲ್ಲಿ ಕೈಗೊಂಡಿದ್ದ ಹವಾಮಾನ ಬದಲಾವಣೆ, ಹೆಚ್ ೧ಬಿ ವೀಸಾ, ವಲಸೆ ನೀತಿ, ಗ್ರೀನ್ ಕಾರ್ಡ್ ನಿಯಮ ಬದಲಾವಣೆ ಸೇರಿದಂತೆ, ಅನೇಕ ಬದಲಾವಣೆಗಳನ್ನು ದೊಡ್ಡಪ್ರಮಾಣದಲ್ಲಿ ತರಲು ಉದ್ದೇಶಿಸಿರುವ ಬಿಡೆನ್ ಅವರು, ಒಬಾಮಾ ಕೇರ್ ಮರುಸ್ಥಾಪನೆ, ಕೋವಿಡ್ ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ರಚನೆ ಸೇರಿದಂತೆ, ಅಮೆರಿಕಾದ ಸiಗ್ರ ಬದಲಾವಣೆಗೆ ಟೊಂಕ ಕಟ್ಟಿದ್ದಾರೆ.
ಹೆಚ್ – ೧ಬಿ ವೀಸಾ ಸೇರಿದಂತೆ, ವಿವಿಧ ವೀಸಾ ಪರಿಷ್ಕರಣೆಗೆ ಮುಂದಾಗಿರುವ ಜೋ ಬಿಡೆನ್ ನೇತೃತ್ವದ ಸರ್ಕಾರದ ಈ ನಿರ್ಧಾರದಿಂದಾಗಿ ಸಹಸ್ರಾರು ಭಾರತೀಯರು ಸೇರಿದಂತೆ, ವಿವಿಧ ದೇಶಗಳ ಉದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗಲಿದ್ದು, ಅಮೆರಿಕಾದಲ್ಲಿ ಉದ್ಯೋಗ ಪಡೆಯಬೇಕು ಎನ್ನುವ ಕನಸು ಕಂಡಿದ್ದ ಮಂದಿ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ಕೈಗೊಂಡ ವಲಸೆ ನೀತಿಯಿಂದಾಗಿ ಸಹಸ್ರಾರು ಐಟಿ ಉದ್ಯೋಗಿಗಳು ಸೇರಿದಂತೆ, ಉನ್ನತ ಕೌಶಲ್ಯ ಹೊಂದಿದ್ದ ಉದ್ಯೋಗಿಗಳು ಸಮಸ್ಯೆಗೆ ಸಿಲುಕಿದ್ದರು.
ಟ್ರಂಪ್ ಆಡಳಿತದ ವಲಸೆ ನೀತಿಯನ್ನು ಪರಿಷ್ಕರಿಸಲು ನೂತನ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಅವರು ಮುಂದಾಗಿರುವುದು ಭಾರತೀಯ ಸಮುದಾಯ ಮತ್ತು ಅಮೆರಿಕಾಕ್ಕೆ ಉದ್ಯೋಗಕ್ಕೆ ತೆರಳಲು ಉದ್ದೇಶಿಸಿರುವ ಯುವ ಸಮುದಾಯಕ್ಕೆ ವರದಾನವಾಗಲಿದೆ.
೫ ಲಕ್ಷ ಭಾರತೀಯರಿಗೆ ಪೌರತ್ವ
ದೀರ್ಘಕಾಲದಿಂದ ಬಾಕಿ ಉಳಿದಿರುವ ೫ ಲಕ್ಷ ಭಾರತೀಯರು ಸೇರಿದಂತೆ, ೧ ಕೋಟಿ ೧೦ ಲಕ್ಷ ಮಂದಿಗೆ ಅಮೆರಿಕಾದ ಪೌರತ್ವ ನೀಡಲು ಜೋ ಬಿಡೆನ್ ಮುಂದಾಗಿದ್ದು, ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ಕಾನೂನು ರೂಪಿಸಲು ಮುಂದಾಗಿದ್ದಾರೆ.
೯೫ ಸಾವಿರ ವಲಸಿಗರು ಸೇರಿದಂತೆ, ದೀರ್ಘಕಾಲದಿಂದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿ, ಎದುರುನೋಡುತ್ತಿರುವ ಮಂದಿಗೆ ಪೌರತ್ವ ನೀಡಲು ಉದ್ದೇಶಿಸಿದ್ದಾರೆ.
ಸದ್ಯ ೧ ಲಕ್ಷದ ೨೫ ಸಾವಿರ ಮಂದಿ ನಿರಾಶ್ರಿತರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು, ಆ ಬಗ್ಗೆಯೂ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ಸಮಗ್ರ ವಲಸೆ ನೀತಿ
ಉನ್ನತ ಕೌಶಲ್ಯದ ಉದ್ಯೋಗಿಗಳು ಅಮೆರಿಕಾದಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ, ಸಮಗ್ರ ವಲಸೆ ನೀತಿಯನ್ನು ಜಾರಿಗೆ ತರಲು ಜೋ ಬಿಡೆನ್ ನೇತೃತ್ವದ ಆಡಳಿತ ಮುಂದಾಗಿದೆ.
ಒಂದೊಂದು ದೇಶಗಳಿಗೆ ಅನ್ಬಯವಾಗುವಂತೆ ವಲಸೆ ನೀತಿಯನ್ನು ತರಬೇಕೆ ಅಥವಾ ಸಮಗ್ರವಾಗಿ ವಲಸೆ ನೀತಿಯನ್ನೇ ತರುವ ಕುರಿತು ಚಿಂತನೆ ನಡೆಸಿದೆ.
ಹೆಚ್ – ೧ಬಿ ವೀಸಾಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ಎಲ್ಲವನ್ನೂ ಪರಿಗಣಿಸಿ ಜೋ ಬಿಡೆನ್ ನೇತೃತ್ವದ ಆಡಳಿತ ಅಂತಿಮ ನಿರ್ಧಾರ ಕೈಗೊಳ್ಳುವ ಸಿದ್ಧತೆ ನಡೆಸಲಾಗಿದೆ.
ಹೆಚ್ – ೧ಬಿ ವೀಸಾ ಸೇರಿದಂತೆ, ಇನ್ನಿತರೆ ಉನ್ನತ ಕೌಶಲ್ಯ ವೀಸಾದ ನಿಯಮಗಳಿಗೆ ಬದಲಾವಣೆ ತರುವುದರಿಂದ ಭಾರತ ಸೇರಿದಂತೆ, ಅನೇಕ ವಿದೇಶಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಅದರಲ್ಲೂ ಭಾರತ ಮತ್ತು ಚೀನಾದಿಂದ ಪ್ರತಿವರ್ಷ ೧೦ ಸಾವಿರಕ್ಕೂ ಹೆಚ್ಚು ಹೆಚ್ – ೧ಬಿ ವೀಸಾಗಾಗಿ ಅರ್ಜಿ ಸಲ್ಲಿಕೆಯಾಗುತ್ತಿವೆ.
ಪ್ರತಿವರ್ಷ ಅಮೆರಿಕಾದಲ್ಲಿ ಉದ್ಯೋಗ ಬಯಸಿ ೧.೪೦ ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ.
ವಲಸೆ ನೀತಿ ಪರಿಷ್ಕರಣೆ ಮಾಡುವುದರಿಂದ ವಲಸೆ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಉದ್ಯೋಗ ಆಧಾರಿತ ವೀಸಾದ ಮೇಲೆ ಅಮೆರಿಕಾಕ್ಕೆ ಬಂದು ಬಹುವರ್ಷಗಳ ಕಾಲ ಕೆಲಸ ಮಾಡಿ ಅಲ್ಲಿಯೇ ಇರುವ ವಿದೇಶಿಯರಿಗೆ ಗ್ರೀನ್ ಕಾರ್ಡ್ ನೀಡುವ ನಿಯಮಗಳನ್ನು ಬದಲಾವಣೆ ಮಾಡಲು ಬಿಡೆನ್ ನೇತೃತ್ವದ ಸರ್ಕಾರ ಮುಂದಾಗಿದೆ.
ಹೆಚ್ – ೧ಬಿ ವೀಸಾ ಅಮಾನತು
ಅಮೆರಿಕಾದ ನಿವಾಸಿಗಳಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಟ್ರಂಪ್ ನೇತೃತ್ವದ ಆಡಳಿತ ೨೦೨೦ರ ಅಂತ್ಯದವರೆಗೂ ಹೆಚ್ – ೧ಬಿ ವೀಸಾವನ್ನು ವಿದೇಶಿ ಉದ್ಯೋಗಿಗಳಿಗೆ ನೀಡುವುದನ್ನು ಅಮಾನತು ಮಾಡಲಾಗಿದೆ. ಇದೀಗ ಜೋ ಬಿಡೆನ್ ನೇತೃತ್ವದ ಆಡಳಿತ ಹಲವು ಸುಧಾರಣೆ ತರಲು ಮುಂದಾಗಿದೆ.

ಮೊದಲ ಮಹಿಳಾ ಉಪಾಧ್ಯಕ್ಷೆ
ಅಮೆರಿಕಾದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಹಾಗೂ ಕಪ್ಪು ವರ್ಣೀಯ ಕಮಲಾ ಹ್ಯಾರೀಸ್ ಅವರು ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಭಾರತೀಯರು ಸೇರಿದಂತೆ, ಕಪ್ಪು ವರ್ಣೀಯರಲ್ಲಿ ಸಂತಸ iನೆಮಾಡಿದೆ.

ಹೆಚ್ – ೧ಬಿ ವೀಸಾ ಸೇರಿದಂತೆ, ಹಲವು ನಿಯಮಗಳ ಬದಲಾವಣೆ.

ಟ್ರಂಪ್ ಆಡಳಿತದ ಸಮಗ್ರ ನೀತಿಗಳ ಬದಲಾವಣೆಗೆ ಬಿಡೆನ್ ನಿರ್ಧಾರ.

ವೀಸಾ ನೀತಿ ಪರಿಷ್ಕರಣೆಯಿಂದಾಗಿ ಭಾರತೀಯ ಉದ್ಯೋಗಿಗಳಿಗೆ ಅನುಕೂಲ.

ಗ್ರೀನ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ.

ಭಾರತೀಯ ಮೂಲದ ಕಮಲಾ ಹ್ಯಾರೀಸ್ ಉಪಾಧ್ಯಕ್ಷೆ.

ಪ್ರತಿವರ್ಷ ಉದ್ಯೋಗ ಬಯಸಿ, ೧.೪೦ ಲಕ್ಷ ಮಂದಿ ವೀಸಾಗೆ ಅರ್ಜಿ.