ಎಚ್.ಬಿ.ಪಾಟೀಲ ಅವರಿಗೆ ರಾಜ್ಯ ಸದ್ಭಾವನಾ ಪ್ರಶಸ್ತಿ

ಕಲಬುರಗಿ:ಜ.29: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಬೆಂಗಳೂರು ವತಿಯಿಂದ ಉಪನ್ಯಾಸಕ, ಸಮಜ ಸೇವಕ ಎಚ್.ಬಿ.ಪಾಟೀಲ ಅವರಿಗೆ 2023-24ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ದೊರೆತಿದೆ.
ಪ್ರತಿವರ್ಷ ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಯು ಪ್ರಸ್ತುತ ವರ್ಷ ಕಲಬುರಗಿ ಜಿಲ್ಲೆಯಿಂದ ಇವರನ್ನು ಆಯ್ಕೆ ಮಾಡಲಾಗಿದೆ. ವಿಜಯಯಪುರ ಜಿಲ್ಲೆಯ ಮುದ್ದೇಬಿಹಾಳ್‍ನ ವಿ.ಬಿ.ಸಿ ಪ್ರೌಢಶಾಲೆಯ ಮೈದಾನದಲ್ಲಿ ಭಾನುವಾರ ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಚ್.ಬಿ.ಪಾಟೀಲ ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪಾಟೀಲ ಅವರಿಗೆ ಜಿಲ್ಲೆಯ ಅನೇಕ ಸಂಘ-ಸಂಸ್ಥೆಗಳು, ಮಹನೀಯರು ಅಭಿನಂದಿಸಿದ್ದಾರೆ.
ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ ಸ್ವಾಮೀಜಿ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ, ಪ್ರಮುಖರಾದ ಮಹೇಂದ್ರಕುಮಾರ ನಾಯಕ, ನೇತಾಜಿ ಆರ್.ನಲವಡೆ, ಪಲ್ಲವಿ ನಾಡಗೌಡ್, ಸಂಗೀತಾ ನಾಡಗೌಡ್, ಸಿ.ಬಿ.ಅಸ್ಕಿ, ಅಮರನಾಥ ಶಿವಮೂರ್ತಿ, ಮಹಾದೇವಪ್ಪ ಎಸ್. ಬಿರಾದಾರ, ಸಿದ್ದೇಶ್ ಸ್ವಾಮಿ ಸೇರಿದಂತೆ ಮುಂತಾದವರು ಇದ್ದರು.