ಎಚ್ ಡಿಕೆ-ಬಿಎಸ್ ವೈ ಭೇಟಿ ತಪ್ಪೇನು-ಜೆಸಿಎಂ ಪ್ರಶ್ನೆ

ಹಾಸನ, ನ 14-ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿದರೆ ತಪ್ಫೇನು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಉಭಯ ನಾಯಕರ ಭೇಟಿ ರಾಜಕೀಯ ಪಡಸಾಲೆಯಲ್ಲಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿರುವ ಬೆನ್ನಲ್ಲೇ ಸಚಿವರಿಂದ ಈ ಹೇಳಿಕೆ ಹೊರಬಿದ್ದಿದೆ.
ಜಿಲ್ಲೆಯ ಹಳೇಬೀಡು ಕೆರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಬ್ಬರೂ ನಾಯಕರು ರಾಜ್ಯದ ಹಿತಾಸಕ್ತಿಗಾಗಿ ಭೇಟಿಯಾದರೆ ಶಿರಾ ಮತ್ತು ಆರ್.ಆರ್ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಮೀಲಾಗಿದ್ದರು ಎಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ ಉಪ ಚುನಾವಣೆಯಲ್ಲಿ ಯಾವುದೇ ಶಾಮೀಲಾಗಿಲ್ಲ ಎಂದು ಸ್ಪಷ್ಟನೆ ನೀಡಿದರಲ್ಲದೇ ಇಬ್ಬರೂ ಚುನಾವಣೆ ಮಾಡಿದ್ದಾರೆ ಎಂದರು. ಎಂದರು.
ಶಾಸಕ ಮುನಿರತ್ನ ಅವರಿಗೆ ಸಂಪುಟದಲ್ಲಿ ಅವಕಾಶ ನೀಡುವುದು ಮುಖ್ಯಮಂತ್ರಿ ಗಳಿಗೆ ಬಿಟ್ಟ ವಿಚಾರ‌ ಎಂದರು.
ಸಚಿವ ಸಂಪುಟದಿಂದ ನಾಲ್ವರು ಸಚಿವರನ್ನು ಕೈಬಿಡುತ್ತಾರೆಂಬ ವಿಚಾರ ಇದುವರೆಗೂ ಸಿಎಂ ಯಾರ ಜತೆಯೂ ಚರ್ಚಿಸಿಲ್ಲ. ಮುನಿರತ್ನ ಅವರ ಚುನಾವಣೆಯಲ್ಲಿ ಮಂತ್ರಿ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಆದರೆ ಬೇರೆ ವಿಷಯದ ಬಗ್ಗೆ
ಇದುವರೆಗೂ ಮಾತನಾಡಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳದರು.