ಎಚ್ ಐವಿ ಪೀಡಿತ ಮಕ್ಕಳ ಸೇವೆ ಮಾಡುತ್ತಿರುವ ನೀಜಪ್ಪ ಹಿರೇಮನಿ ದಂಪತಿಗಳ ಕಾರ್ಯ ಶ್ಲಾಘನೀಯ : ಡಾ, ಕಾಗೆ

ಅಥಣಿ:ಡಿ.3: ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ ದಿನಾಚರಣೆ ಹಾಗೂ ಜನಜಾಗೃತಿ ಜಾಥಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಈ ವೇಳೆ ಸುಮಾರು ಹನ್ನೆರೆಡು ವರ್ಷಗಳಿಂದ ಎಚ್ ಐ ವಿ ಏಡ್ಸ್ ಮಕ್ಕಳನ್ನು ಪಾಲನೆ, ಪೆÇೀಷಣೆ, ಹಾಗೂ ವಿದ್ಯಾಭ್ಯಾಸ ವೈದ್ಯಕೀಯ ಸೌಲಭ್ಯದ ಜೊತೆಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತಾ ಬಂದಿರುವ ನೀಜಪ್ಪ ಹಿರೇಮನಿ ಹಾಗೂ ಅವರ ಪತ್ನಿ ಸಂಗೀತಾ ಹಿರೇಮನಿ ಅವರನ್ನು ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಅವರ ಸಿಬ್ಬಂದಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ತಾಲೂಕಾ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಅವರು ತಾಲೂಕಾ ಆಸ್ಪತ್ರೆಯಲ್ಲಿ ಎ ಆರ್ ಟಿ ಸೆಂಟರ್ 2012 ರಲ್ಲಿ ಪ್ರಾರಂಭ ಮಾಡಿದ್ದು ಇದುವರೆಗೂ ಸುಮಾರು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಚ್ ಐ ವಿ ಎನ್ನುವುದು ಭಯಾನಕ ರೋಗವಲ್ಲ, ಅವರ ಜೊತೆ ಬರೆತು ಪ್ರೀತಿಯಿಂದ ಇದ್ದು ಅವರು ನಮ್ಮವರಂತೆ ನೋಡಿಕೊಳ್ಳೊಣ,ಹಾಗೂ ಅಥಣಿಯಲ್ಲಿ ನೀಜಪ್ಪ ಹಿರೇಮನಿ ದಂಪತಿಗಳು ಸುಮಾರು ವರ್ಷಗಳಿಂದ ಎಚ್ ಐ ವಿ ಸೊಂಕಿತ ಮಕ್ಕಳ ಪಾಲನೆ, ಪೆÇೀಷಣೆ, ಮಾಡಿ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದರ ಜೊತೆಗೆ ಅವರ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಂಡು ಅವರ ಮುಂದಿನ ಜೀವನ ಎಲ್ಲರಂತೆ ಸರಳವಾಗಿ ನಡೆಯುವಂತೆ ಸೊಂಕಿತ್ ಹುಡುಗನ ಜೊತೆ ಸೊಂಕಿತ್ ಹುಡುಗಿಯ ಮದುವೆ ಮಾಡುವುದರ ಜೊತೆಗೆ ಮಾನವೀಯತೆಯನ್ನು ಮೆರೆದು ಸುಮಾರು ಮಕ್ಕಳಿಗೆ ಹೊಸ ಉಜ್ವಲ ಜೀವನವನ್ನು ರೂಪಿಸಿದ್ದಾರೆ ಈ ದಂಪತಿಗಳಿಗೆ ನಾವು ಸನ್ಮಾನ ಮಾಡುತ್ತಿರುವುದು ನಮ್ಮ ಸೌಭಾಗ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ನೀಜಪ್ಪ ಹಿರೇಮನಿ ಮಾತನಾಡಿ ಎಚ್ ಐ ವಿ ಪಿಡಿತ ಮಕ್ಕಳಲ್ಲಿ ದೇವರನ್ನು ಕಾಣೋಣ ನಮ್ಮನ್ನು ಹೇಗೆ ಪ್ರೀತಿಸಿ ಕೊಳ್ಳುತ್ತೆವೆಯೊ ಹಾಗೆಯೇ ರೋಗಿಗಳನ್ನು ಪ್ರೀತಿಸೋಣ ಸುಮಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೋಡಗಿ ಕೊಂಡಿದ್ದು ಈ ಸೇವೆಯನ್ನು ಗುರುತಿಸಿ ನಮ್ಮ ಕುಟುಂಬವನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಿ ಗೌರವಿಸಿದ ತಾಲೂಕಾ ಆಸ್ಪತ್ರೆಯ ಡಾ. ಬಸಗೌಡ ಕಾಗೆ ಅವರಿಗೆ ಹಾಗೂ ಎಲ್ಲ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿ ಹಾಗೆಯೆ ಮಾನಸಿಕ ಅಸ್ವಸ್ಥರು, ಅನಾಥರು ಹಾಗೂ ಬೀದಿಯ ಬದಿಗೆ ಬಿದ್ದಂತ ಜನರನ್ನು ನೀವು ಎಲ್ಲಾದರೂ ಕಂಡರೆ ಕೂಡಲೇ ನನ್ನನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುರಗೇಶ ಇಂಗಳಿ, ಬಸವರಾಜ ಮುದಗೌಡರ, ಪ್ರಕಾಶ ನರಟ್ಟಿ, ರವಿ ಹುದ್ದಾರ ಸೇರಿದಂತೆ ಆಯ್ ಸಿ ಟಿ ಸಿ ಹಾಗೂ ಎ ಆರ್ ಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು