ಎಚ್ ಐಂಡ್ ಎಂ. ಎಜೆನ್ಸಿಸ್ ಕಚೇರಿಯಲ್ಲಿ ಮಹಾಲಕ್ಷ್ಮೀ ಪೂಜೆ ಸಂಪನ್ನ

ಬೀದರ:ನ.19:ಇಲ್ಲಿಯ ಪಾಪನಾಶ ಸಮೀಪದಲ್ಲಿರುವ ಶ್ರೀ ಕಾರ್ತಿಕ ಮಠಪತಿ ಅವರ ಮಾಲಿಕತ್ವದಲ್ಲಿ ನಡೆಸಿಕೊಂಡು ಹೋಗುತ್ತಿರುವ ಎಚ್ ಐಂಡ್ ಎಂ ಔಷಧೋಪಕರಣ ಪ್ರಧಾನ ಕಚೇರಿಯಲ್ಲಿ ಮಹಾಲಕ್ಷ್ಮೀ ಪೂಜೆ ನೆರವೇರಿತು. ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜನೆ ಮಾಡಲಾದ ಲಕ್ಷ್ಮೀ ಪೂಜೆಯಲ್ಲಿ ಪೂಜ್ಯ ಶ್ರೀ ಜ್ಯೋತಿರ್ಮಯಾನಂದ ಸ್ವಾಮಿಗಳು ಪಾಲ್ಗೊಂಡು ಮಾತನಾಡಿ “ಪ್ರತಿಯೊಬ್ಬರು ಕಾಯಕ ತತ್ವವನ್ನು ಅಳವಡಿಸಿಕೊಳ್ಳಬೇಕು. ನಮ್ಮ ಜಿಲ್ಲೆಗೆ ಔಷಧಿಗಳನ್ನು ವಿತರಣೆ ಮಾಡುವ ಮೂಲಕ ಲಿಂಗರಾಜ ಹಿರೇಮಠ ಹಾಗೂ ಕಾರ್ತಿಕ ಮಠಪತಿ ಅವರು ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿರುವುದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಈ ಔಷಧ ಅಂಗಡಿಯಿಂದ ಸಮಾಜಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು. ಜೊತೆಗೆ ಶ್ರೀ ರವೀಂದ್ರ ಸ್ವಾಮಿಯವರು ಸಮಾಜಕ್ಕಾಗಿ ಸಲ್ಲಿಸುತ್ತಿರುವ ಸೇವೆ ಕುರಿತು ಶ್ಲಾಘಿಸಿದರು.
ಏಕತಾ ಫೌಂಡೇಶನ್ ಅಧ್ಯಕ್ಷರಾದ ಶ್ರೀ ರವೀಂದ್ರ ಸ್ವಾಮಿಯವರು ಮಾತನಾಡಿ “ಇಂದು ಲಿಂಗರಾಜ ಹಿರೇಮಠ ಹಾಗೂ ಕಾರ್ತಿಕ ಸ್ವಾಮಿಯವರ ನೇತೃತ್ವದಲ್ಲಿ ಆರಂಭ ಮಾಡಲಾದ ಎಚ್. ಐಂಡ್ ಎಂ ಫಾರ್ಮಾಸಿಟಿಕಲ್ ಅಂಗಡಿ ಯಶಸ್ವಿಯಾಗಿ ನಡೆಯಲಿ. ಈ ಕಾಯಕದಿಂದ ಜಿಲ್ಲೆಯ ಜನತೆಗೆ ಉತ್ತಮ ಸೇವೆ ನೀಡಲಿ. ಅವರ ಕುಟುಂಬದವರಿಗೆ ದೇವರು ಉತ್ತಮ ಯಶಸ್ವಿ ಹಾಗೂ ಆಯುಷ್ಯ ನೀಡಿ ಕಾಪಾಡಲಿ ಎಂದು ಶುಭ ಹಾರೈಸಿದರು.
ಪತ್ರಕರ್ತ ಶಿವಕುಮಾರ ಸ್ವಾಮಿಯವರು ಮಾತನಾಡಿ “ಎರಡು ತಿಂಗಳ ಹಿಂದೆ ಎಚ್ ಐಂಡ್ ಎಂ ಔಷಧಿ ಕಚೇರಿಯನ್ನು ಪೂಜ್ಯ ಜ್ಯೋತಿರ್ಮಯಾನಂದ ಮಹಾಸ್ವಾಮಿಗಳು ತಮ್ಮ ಅಮೃತಹಸ್ತದಿಂದ ಉದ್ಘಾಟನೆ ಮಾಡಿದ್ದು ಇಲ್ಲಿ ಸ್ಮರಣೀಯ. ಕಾರ್ತಿಕ ಮಾಸದಲ್ಲಿ ಮಹಾಲಕ್ಷ್ಮೀ ಪೂಜೆ ಮಾಡಿರುವುದು ಭಕ್ತಿಯ ಸ್ವರೂಪವಾಗಿದೆ. ದೇವರಿಗಿಂತ ಗುರು ಶ್ರೇಷ್ಠ ಎನ್ನುವ ಕಬೀರದಾಸರ ವಾಣಿಯಂತೆ ಗುರುವಿನ ಕರುಣೆಯಿಂದ ಎಜೆನ್ಸಿ ಆರಂಭವಾಗಿದೆ. ಅವರ ಆಶೀರ್ವಾದದಿಂದ ಕಾಯಕ ಸುಸೂತ್ರವಾಗಿ ನಡೆಯಲಿ. ಕಾರ್ತಿಕ ಹಾಗೂ ಲಿಂಗರಾಜ ಅವರಿಗೆ ಆ ಭಗವಂತ ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಎಂದು ಶುಭ ಹಾರೈಸಿದರು.
ಇದೇ ವೇಳೆ ನಗರಸಭೆ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ರಾಜಶೇಖರ ಮಠ, ಸನ್ಮುಖಯ್ಯಾ ಮಠಪತಿ, ಡಾ. ರಾಜಕುಮಾರ ಹೆಬ್ಬಾಳೆ, ಶಿವಯ್ಯ ಸ್ವಾಮಿ, ಓಂಪ್ರಕಾಶ ರೊಟ್ಟೆ, ಶ್ರೀಕಾಂತ ಸ್ವಾಮಿ ಸೋಲಪುರ, ಮಹೇಶ್ವರ ಸ್ವಾಮಿ, ಸುನೀಲ ಬಚ್ಚನ್, ಪ್ರಕಾಶ ಸಾಲಿ, ಬಸವರಾಜ ಸ್ವಾಮಿ ಖಂಡಾಳ, ಯೋಗೇಂದ್ರ ಯದಲಾಪುರೆ, ಶಿವಶರಣಪ್ಪ ಗಣೇಶಪೂರ, ಶಿವಕಾಂತ ಸ್ವಾಮಿ, ರಾಜಕುಮಾರ ಸ್ವಾಮಿ ಕಣಜಿ, ಶ್ರೀಕಾಂತ ಪಾಟೀಲ, ಶಂಕರ ಸ್ವಾಮಿ ಸಂಗಮ, ದಿಲೀಪ್ ಸ್ವಾಮಿ ಸಿಂದಬಂದಗಿ, ಸತಿಷ ಬೆಳಕೋಟೆ, ಪರಮೇಶ್ವರ ಬಿರಾದಾರ, ರೇಣುಕಾ ಹಿರೇಮಠ, ಸತ್ಯವತಿ ಸ್ವಾಮಿ, ಶಿಲ್ಪಾ ಮಠಪತಿ, ಪುತಳಾಬಾಯಿ ಸ್ವಾಮಿ, ಪ್ರೇಮಲಾ ಮಠಪತಿ, ಸಂತೋಷಿ ಸಾಲಿ, ಸಂಗೀತಾ ಬಸವರಾಜ ಖಂಡಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.