ಎಚ್.ಎಸ್.ಪಾಟೀಲ ದೈಹಿಕ ಶಿಕ್ಷಣ ವಿದ್ಯಾರ್ಥಿಗಳ ಉತ್ತಮ ಸಾಧನೆ

ತಾಳಿಕೋಟೆ:ಜು.17: ಪಟ್ಟಣದಲ್ಲಿರುವ ಶ್ರೀ ಎಚ್.ಎಸ್.ಪಾಟೀಲ ದೈಹಿಕ ಶಿಕ್ಷಣ ಮಹಾ ವಿದ್ಯಾಲಯದ ಬಿಪಿಇಡಿ 2023-24ನೇ ಸಾಲಿನ ಅಂತಿಮ ವರ್ಷದ ವಿಧ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಸಚೀನ ರಾಠೋಡ(ಪ್ರಥಮ) ಶೇ.83.1, ಪ್ರಸನ್ನ ನಾಡಗೌಡ(ದ್ವಿತೀಯ) ಶೇ.81.5, ತಿಮ್ಮಣ್ಣ ನಾಯಕ(ತೃತೀಯ) ಶೇ. 80.9, ಸಾಗರ ಜಾಧವ(ನಾಲ್ಕನೇ) ಶೇ.80.7, ಅಸ್ಲಂ ನಾಯ್ಕೋಡಿ(ಐದನೇ) ಶೇ. 80.4 ಸಾಧನೆ ಮಾಡಿ ಶಿಕ್ಷಣ ಸಂಸ್ಥೆಯ ಕೀರ್ತಿ ತಂದಿದ್ದಾರೆ.

ವಿಧ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ, ಕಾರ್ಯದರ್ಶಿ ಸಚೀನ ಪಾಟೀಲ, ಪ್ರಾಚಾರ್ಯ ಶಿವು ನಾಯಕ, ಅಂಬ್ರೀಶ ನಾಗರಾಳ, ಎಂ.ಎಸ್.ರಾಯಗೊಂಡ, ಶರಣು ಬಿರಾದಾರ, ಮತ್ತು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.