ಎಚ್.ಎಂ. ರೇವಣ್ಣನವರ 72ನೇಯ ಜನ್ಮ ದಿನಾಚರಣೆ

ಬೀದರ :ನ.10:ನಗರದ ಹಾಲು ಮತ ಗೊಂಡ ವಸತಿ ನಿಲಯ ಆವರಣದ ಸಾಯಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ಬೀದರ ಹಾಗೂ ವಿವಿಧ ಸಂಘಟನೆಯ ಬೆಂಬಲದೊಂದಿಗೆ ಸನ್ಮಾನ್ಯ ಶ್ರೀ ಎಚ್.ಎಂ. ರೇವಣ್ಣನವರ 72ನೇಯ ಜನ್ಮ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀ ಅಮೃತರಾವ ಚಿಮಕೋಡೆ ಇವರು ಮಾತನಾಡುತ್ತಾ, ಸನ್ಮಾನ್ಯ ಶ್ರೀ ಎಚ್.ಎಂ. ರೇವಣ್ಣನವರು ಸಾಮಾಜಿಕ, ಕ್ರಾಂತಿಯ ಹರಿಕಾರರಾಗಿದ್ದು, ಹಿಂದುಳಿದ ವರ್ಗಗಳ, ದೀನ-ದಲಿತರ, ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದವರಾಗಿದ್ದು, ವಿಶೇಷವಾಗಿ ನಮ್ಮ ಬೀದರ ಜಿಲ್ಲೆಯ ಗೊಂಡ ಜನಾಂಗದ ಸಮಸ್ಯೆಯನ್ನು ಸ್ಪಂದಿಸಿದ ಧೀಮಂತ ನಾಯಕರಾಗಿದ್ದಾರೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಪಂಡಿತರಾವ ಚಿದ್ರಿ, ಬಾಬುರಾವ ಮಲ್ಕಾಪೂರೆ, ವಿಜಯಕುಮಾರ ಖಾಶೆಂಪೂರ, ಮಲ್ಲಿಕಾರ್ಜುನ ಬಿರಾದಾರ, ಎಂ.ಎಸ್. ಕಟಗಿ, ಮಾಳಪ್ಪ ಅಡಸಾರೆ, ಬಸವರಾಜ ಮಾಳಗೆ, ಗೊಂಡ ಬಾಬುರಾವ, ಪಿ.ಎಸ್. ಇಟಕಂಪಳ್ಳಿ, ಡಿ. ಭೀಮಸಿಂಗ, ಹಣಮಂತ ಮಲ್ಕಾಪೂರ, ಬಾಬು ಸಂಗೊಳಗಿ, ಸಂತೋಷ ಜೋಳದಾಪಕೆ, ಬಜರಂಗ ಖಾಶೆಂಪೂರ, ರವಿ ಸಿರ್ಸಿ, ಶಿವಶಂಕರ ನೀಲಮನಳ್ಳಿ, ತುಕಾರಾಮ ಚಿಮಕೋಡ, ವಿಠಲ ಹಳೆಂಬುರ್, ವಿಜಯಕುಮಾರ ತೋರಣಾ, ಅನೀಲ ಚಿಲ್ಲರ್ಗಿ, ವಿರೇಶ ಜಾಂಪಡೆ, ಸಿದಗೊಂಡ ಸಿದ್ದೇಶ್ವರ ಇತರರು ಉಪಸ್ಥಿತರಿದ್ದರು.