ಮುಂಬೈ,ಜೂ.೬- ೨೦೦೨೨ ರ ಹಣಕಾಸು ವರ್ಷದಲ್ಲಿ ಸೆಪ್ಟೆಂಬರ್ ೩೦ರ ತನಕ ಅಮೆರಿಕಾ, ಪೌರತ್ವ ಮತ್ತು ವಲಸೆ ಸೇವೆಗಳು ಒಟ್ಟಾರೆ ೪.೪೧ ಲಕ್ಷ ಎಚ್-೧ಬಿ ವೀಸಾಗೆ ಅನುಮತಿ ನೀಡಿದ್ದು ಅದರಲ್ಲಿ ಭಾರತೀಯರಿಗೆ ಸಿಂಹಪಾಲು ಸಿಕ್ಕಿದೆ.
ಅಮೆರಿಕಾ ನೀಡಿದ ಒಟ್ಟು ೪.೪೧ ಲಕ್ಷ ಎಚ್-೧ಬಿ ವೀಸಾದಲ್ಲಿ ೩.೨೦ ಲಕ್ಷ ವೀಸಾ ಭಾರತೀಯರಿಗೆ ಸಿಕ್ಕಿದೆ. ಒಟ್ಟಾರೆ ಎಚ್-೧ಬಿ ವೀಸಾದಲ್ಲಿ ಭಾರತೀಯರಿಗೆ ಶೇ.೭೨.೬ ರಷ್ಟು ಪಾಲು ಸಿಕ್ಕಿದೆ.
ಭಾರತ ಹೊರತು ಪಡಿಸಿದರೆ ಚೀನಾಗೆ ೫೫,೦೩೮ ಸಾವಿರ ವೀಸಾ ಸಿಕ್ಕಿದೆ. ಅಂದರೆ ಶೇ. ೧೨.೫ ರಷ್ಟು ಕೆನಡಾದ ಮಂದಿಗೆ ೪,೨೩೫ ವೀಸಾ ಸಿಕ್ಕಿದೆ. ವೀಸಾ ಪಡೆದ ದೇಶದಲ್ಲಿ ಕೆನಡಾ ಮೂರನೇ ಸ್ಥಾನದಲ್ಲಿದೆ.
ಎಚ್-೧ ಬಿ ವೀಸಾಗಳನ್ನು ಗರಿಷ್ಠ ಆರು ವರ್ಷಗಳವರೆಗೆ ಹಂಚಬಹುದು. ಫಲಾನುಭವಿ ಅಮೆರಿಕನ್ ಉದ್ಯೋಗದಾತರಿಂದ ಪ್ರಾಯೋಜಿಸಲ್ಪಟ್ಟ ವ್ಯಕ್ತಿಯಾಗಿದ್ದಾರೆ. ಗ್ರೀನ್ ಕಾರ್ಡ್‌ಗಾಗಿ ಟ್ರ್ಯಾಕ್‌ನಲ್ಲಿದ್ದರೆ, ನಿಯತಕಾಲಿಕ ವಿಸ್ತರಣೆ ಅನುಮತಿಸಲಾಗುತ್ತದೆ ಎಂದು ಅಮೆರಿಕಾ ಹೇಳಿದೆ.
ವರದಿಯ ಪ್ರಕಾರ ಎಚ್-೧ಬಿ ಸ್ಪೆಷಾಲಿಟಿ ಆಕ್ಯುಪೇಶನ್ ವರ್ಕರ್ಸ್ ಗುಣಲಕ್ಷಣಗಳ ವರದಿ ಬಿಡುಗಡೆ ಮಾಡಿದೆ, ೨೦೨೨ ರ ಆರ್ಥಿಕ ವರ್ಷದಲ್ಲಿ ಅನುಮೋದಿಸಲಾದ ಎಚ್.-೧ ಬಿ ವೀಸಾ ಅರ್ಜಿಯ ಸಂಖ್ಯೆ ಶೇ.೮.೬ ರಷ್ಟು ಹೆಚ್ಚಾಗಿದೆ.
ಹಿಂದಿನ ಆರ್ಥಿಕ ವರ್ಷದಲ್ಲಿ, ೩.೦೧ ಲಕ್ಷ ಭಾರತೀಯರು ಯಶಸ್ವಿಯಾಗಿ ಎಚ್-೧ ಬಿ ವೀಸಾಗಳನ್ನು ಪಡೆದಿದ್ದರು, ಇದು ೨೦೨೧ ರಲ್ಲಿ ಅನುಮೋದಿಸಲಾದ ಒಟ್ಟು ವೀಸಾಗಳ ಶೇ ೭೪.೧ ಆಗಿತ್ತು. ಇದಕ್ಕೆ ವಿರುದ್ಧವಾಗಿ, ೫೦,೩೨೮ ಚೀನಾದ ಮಂದಿ ವೀಸಾ ಪಡೆದಿದ್ದಾರೆ
೨೦೨೨ರಲ್ಲಿ ಭಾರತ ೩,೨೦,೭೯೧ ಮಂದಿ ವೀಸಾ ಪಡೆದಿದ್ದರೆ ಚೀನಾ ೫೫,೦೩೮ ಮಂದಿ, ಕೆನಡಾ ೪,೨೩೫ ಮಂದಿ ಸೇರಿದಂತೆ ಒಟ್ಟು ೪,೪೧,೫೦೨ ಮಂದಿ ವೀಸಾ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.
ವಿಶೇಷವಾಗಿ ಭಾರತೀಯ ತಂತ್ರಜ್ಞಾನ ವೃತ್ತಿಪರರಲ್ಲಿ. ಕಂಪ್ಯೂಟರ್-ಸಂಬಂಧಿತ ಉದ್ಯೋಗಗಳಲ್ಲಿನ ಕಾರ್ಮಿಕರಿಗೆ ೨೦೨೨ ರಲ್ಲಿ ಅನುಮೋದಿಸಲಾದ ಎಚ್-೧ಬಿ ಅರ್ಜಿಗಳ ಒಟ್ಟು ಸಂಖ್ಯೆಯು ೨.೯೧ ಲಕ್ಷ ಅಥವಾ ಒಟ್ಟು ಅನುಮೋದಿತ ಅರ್ಜಿಗಳ ಶೇ.೬೬ ರಷ್ಟಾಗಿದೆ