ಎಚ್‍ಡಿಕೆ ಸಿಎಂ ಹೇಳಿಕೆ ಸರಿಯಲ್ಲ: ತೊರಗಲ್

ಹುಬ್ಬಳ್ಳಿ,ನ11: ರಾಜ್ಯದ ಜೆಡಿಎಸ್ ಧುರೀಣರು ಹಾಗೂ ಕಾರ್ಯಕರ್ತರು ಹೇಳುವಂತೆ ಪದೇ ಪದೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗುತ್ತಾರೆ ಮತ್ತು ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂಬಂತಂಹ ಹೇಳಿಕೆಗಳು ಸರಿಯಲ್ಲವೆಂದು ಜೆಡಿಎಸ್ ಮಾಜಿ ಮಹಾಪ್ರಧಾನ ಕಾರ್ಯದರ್ಶಿ ಐ.ಎಂ. ತೊರಗಲ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಸಲ ಮುಖ್ಯಮಂತ್ರಿಯಾಗಿದ್ದಾರೆ. ಪಕ್ಷದಲ್ಲಿ ಅನೇಕ ಹಿರಿಯ ನುರಿತ ಧುರೀಣರಿದ್ದು, ಅವರನ್ನು ಗುರುತಿಸಿ ಬೇರೆಯವರನ್ನು ಮುಖ್ಯಮಂತ್ರಿ ಮಾಡಿರಿ ಎಂದು ಜೆಡಿಎಸ್ ಮುಖಂಡರಲ್ಲಿ ಮನವಿ ಮಾಡಿದರು.
ಈ ಮೊದಲು ಪಕ್ಷದ ವರಿಷ್ಠರು ಹೇಳಿದ ಹಾಗೆ ನಡೆಯುತ್ತಿತ್ತು. ಆದರೇ ಈಗ ಪಕ್ಷ ಕಾರ್ಯಕರ್ತರ ಹೊರನಡೆಯಿಂದ ದಾರವಿಲ್ಲದ ಗಾಳಿಪಟವಿದ್ದಂತಾಗಿದೆ ಎಂದು ಅವರು ಹೇಳಿದರು.