ಎಚ್‌ಡಿಕೆ ವಿರುದ್ಧ ಡಿಕೆಶಿ ಕಿಡಿ

ಚನ್ನಪಟ್ಟಣ, ಮೇ.೮- ಸಿಎಂ ಆಗಿದ್ದ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕ್ಷೇತ್ರಕ್ಕೆ ನೀಡಿರುವ ಅಭಿವೃದ್ಧಿಯ ಸಾಕ್ಷಿ ಗುಡ್ಡೆ ಏನು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಚ್ಡಿಕೆ ಮತ್ತು ಸಿಪಿವೈ ವಿರುದ್ಧ ವಾಗ್ದಾಳಿ ಮಾಡಿದರು.
ಪಟ್ಟಣದಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ನಾನಿಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಭಾಷಣ ಮಾಡಲು ಬಂದಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಭಾಷಣ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ದೂರ ಇಡಬೇಕು ಎಂದು ಕುಮಾರಸ್ವಾಮಿ ೩೮ ಸೀಟ್ ಗೆದ್ದಿದ್ದರೂ ಅವರನ್ನು ಮುಖ್ಯಮಂತ್ರಿ ಮಾಡಿದೆವಲ್ಲಾ ಮುಖ್ಯಮಂತ್ರಿಯಾಗಿ ಈ ಕ್ಷೇತ್ರಕ್ಕೆ ಏನು ಅಭಿವೃದ್ಧಿ ಮಾಡಿದ್ದಾರೆ ಕಾರ್ಯಕರ್ತರಿಗೆ ಏನು ಮಾಡಿದ್ದಾರೆ ಕ್ಷೇತ್ರದ ಸಿಎಂ ಆಗಿ ಅವರ ಸಾಕ್ಷಿ ಗುಡ್ಡೆ ಏನು ಎಂದು ಪ್ರಶ್ನೆ ಮಾಡಿದರು.
ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಪಕ್ಷದಿಂದ ಕ್ಷೇತ್ರಕ್ಕೆ ನೀರಾವರಿ ಮಾಡಲು ಸಹಕಾರ ನೀಡಿದವು. ಆದರೆ ಅವರು ಕಾಂಗ್ರೆಸ್‌ಗೆ ಟಿಂಗ್ ಕಟ್ಟಿ ಕಮಲ ಹಿಡಿದು ಮಂತ್ರಿ ಆಗಿ ಈಗ ವಿಧಾನ ಪರಿಷತ್ ಸದಸ್ಯರಾಗಿದ್ದು, ಮೂರುವರೆ ವರ್ಷ ಬಿಜೆಪಿ ಅಧಿಕಾರ ಮಾಡಿತಲ್ಲ ಯೋಗೇಶ್ವರ್‌ಅವರು ಬಿಜೆಪಿ ಸರ್ಕಾರದಿಂದ ಏನಾದರೂ ಅಭಿವೃದ್ಧಿ ಮಾಡಿದ್ದಾರಾ ಅವರ ಸಾಕ್ಷಿ ಗುಡ್ಡೆ ಏನು ಎಂದು ಪ್ರಶ್ನೆ ಮಾಡಿದ ಯೋಗೇಶ್ವರ್‌ಅವರು ಯಾವುದಾದರೂ ಕಂಟ್ರಾಕರ್‌ಗೆ ಲಂಚ ಇಲ್ಲದೆ ಸೈನ್ ಹಾಕಿದ್ದಾರಾ ಉದಾಹರಣೆ ಇದ್ದರೆ ಕೊಡಿ ಎಂದು ವಾಗ್ದಾಳಿ ಮಾಡಿದರು.
ಈಗಾಗಲೆ ಕುಮಾರಸ್ವಾಮಿ ಹಾಗೂ ಯೋಗೇಶ್ವರ್‌ಅವರಿಗೆ ಅವಕಾಶ ನೀಡಾಗಿದ್ದು ಅವರ ಅವಕಾಶ ಮುಗಿದಿದ್ದು ಗಂಗಾಧರ್‌ಗೆ ಅವಕಾಶ ಸಿಕ್ಕಿದ್ದು ನೀವೇಲ್ಲಾ ಸಹಕಾರ ಮಾಡಿ. ನಾನು ಇಂಧನ ಸಚಿವರಾಗಿದ್ದ ವೇಳೆ ರಾಜ್ಯದಲ್ಲಿ ಪ್ರತಿ ಎರಡು ಪಂಪ್‌ಸೆಟ್‌ಗೆ ಒಂದು ಟಿ.ಸಿ ಉಚಿತವಾಗಿ ನೀಡಿ ವಿದ್ಯುತ್ ಸಂಪರ್ಕಕ್ಕೆ ಅವಕಾಶ ಮಾಡಿಕೊಟ್ಟಿದ್ದೇನೆ. ಕ್ಷೇತ್ರದಲ್ಲಿ ಗಂಗಾಧರ್ ಅಭ್ಯರ್ಥಿ ಅಲ್ಲ ಡಿಕೆಶಿ ಎಂದು ಮತ ನೀಡಿ ಎಂದು ಮನವಿ ಮಾಡಿದರು.
ಜನತೆಯ ಆದಾಯ ಪಾತಾಳಕ್ಕೆ ಇಳಿದು, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಬಿಜೆಪಿ ಪಕ್ಷದಿಂದ ಜನರು ತತ್ತರಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಕಾಂಗ್ರೆಸ್‌ಗೆ ಇಷ್ಟೊಂದು ಬೆಂಬಲ ಸಿಗುತ್ತದೆ ಎಂದು ಗೊತ್ತಿದ್ದರೆ ನಾನೆ ಚನ್ನಪಟ್ಟಣದಲ್ಲಿ ಅರ್ಜಿ ಹಾಕುತ್ತಿದ್ದೆ. ನನ್ನ ಬಾಮೈದ ಶರತ್‌ಚಂದ್ರ ಕ್ಷೇತ್ರದಲ್ಲಿ ಟಿಕೆಟ್ ಕೇಳಿದ್ದರು. ಆದರೆ ನಾವು ಒಪ್ಪಲಿಲ್ಲ. ರಾಜಕಾರಣಕ್ಕೆ ನಾನು, ನನ್ನ ತಮ್ಮ ಸಾಕು. ಕುಟುಂಬ ರಾಜಕಾರಣಕ್ಕಿಂತ ನೂರು ಜನ ಕಾರ್ಯಕರ್ತರಿಗೆ ಅಧಿಕಾರ ಕೊಟ್ಟು ಬೆಳೆಸೋಣ ಉಜ್ವಲ ಯೋಜನೆಯ ಜಾಹೀರಾತು ಫಲಕ ಏನಾಯಿತು ಎಂದು ಬಿಜೆಪಿ ಕಾರ್ಯಕರ್ತರು ನಿಮ್ಮ ಅಭ್ಯರ್ಥಿ ಆಗಿರುವ ಯೋಗೇಶ್ವರ್‌ರನ್ನು ಕೇಳಿ ಕಾಂಗ್ರೆಸ್ ಸರ್ಕಾರದಲ್ಲಿ ೪೫೦ಕ್ಕೆ ಕೊಟ್ಟಿದ್ದ ಗ್ಯಾಸ್‌ಗೆ ಬಿಜೆಪಿ ಸರ್ಕಾರ ೧೨೦೦ ಮಾಡಿದ್ದಾರೆ. ಅಡುಗೆ ಎಣ್ಣೆಗೆ ೨೦೦ ರೂ ಮಾಡಿದ್ದಾರೆ ತಿನ್ನೋ ಅನ್ನಕ್ಕೂ ಜಿಎಸ್‌ಟಿ ಹಾಕಿದ್ದಾರಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.