ಎಚ್‌ಟಿಟಿ ಖರೀದಿಗೆ ಕೇಂದ್ರದ ಅನುಮೋದನೆ

ನವದೆಹಲಿ,ಮಾ.೨- ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್- ಎಚ್‌ಎಎಲ್‌ನಿಂದ ೭೦ ಎಚ್‌ಟಿಟಿ-೪೦ ಬೇಸಿಕ್ ಟ್ರೈನರ್ ಏರ್‍ಕ್ರಾಫ್ಟ್ ಖರೀದಿಸಲು ೬,೮೨೮ ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಭಾರತೀಯ ವಾಯುಪಡೆಗೆ ೬,೮೨೮.೩೬ ಕೋಟಿ ರೂಪಾಯಿ ವೆಚ್ಚದಲ್ಲಿ ಎಚ್ ಎ ಎಲ್ ಬೇಸಿಕ್ ಟ್ರೈನರ್ ಏರ್‍ಕ್ರಾಫ್ಟ್‌ಗಳನ್ನು ಖರೀದಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ವಿಮಾನಗಳನ್ನು ಮುಂದಿನ ಆರು ವರ್ಷಗಳ ಅವಧಿಯಲ್ಲಿ ವಿಮಾನವನ್ನು ಪೂರೈಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಚ್‌ಟಿಟಿ-೪೦ ಟರ್ಬೊ ಪ್ರಾಪ್ ವಿಮಾನವಾಗಿದೆಕಡಿಮೆ ವೇಗದ ನಿರ್ವಹಣೆ ಗುಣಗಳನ್ನು ಹೊಂದಲು ಮತ್ತು ಉತ್ತಮ ತರಬೇತಿ ಒದಗಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದ್ದಾರೆ

ಸಂಪೂರ್ಣ ಏರೋಬ್ಯಾಟಿಕ್ ಟಂಡೆಮ್ ಸೀಟ್ ಟರ್ಬೊ ಟ್ರೈನರ್ ಹವಾನಿಯಂತ್ರಿತ ಕಾಕ್‌ಪಿಟ್, ಆಧುನಿಕ ಏವಿಯಾನಿಕ್ಸ್, ಹಾಟ್ ರೀ-ಫ್ಯೂಲಿಂಗ್, ರನ್ನಿಂಗ್ ಚೇಂಜ್ ಓವರ್ ಮತ್ತು ಶೂನ್ಯ-ಶೂನ್ಯ ಎಜೆಕ್ಷನ್ ಸೀಟ್‌ಗಳನ್ನು ಹೊಂದಿದೆ ಹೊಸದಾಗಿ ಸೇರ್ಪಡೆಗೊಂಡ ಪೈಲಟ್‌ಗಳ ತರಬೇತಿಗಾಗಿ ಐಎಎಫ್‌ನ ಮೂಲ ತರಬೇತುದಾರ ವಿಮಾನಗಳ ಕೊರತೆಯನ್ನು ಈ ವಿಮಾನ ಪೂರೈಸಲಿದೆ ಎಂದು ತಿಳಿಸಿದ್ದಾರೆ.

೪.೫೦೦ ಉದ್ಯೋಗ ಸೃಷ್ಟಿ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪೂರೈಕೆ ಸರಪಳಿಯಲ್ಲಿ ಎಂಎಸ್‌ಎಂಇ ಸೇರಿದಂತೆ ಭಾರತೀಯ ಖಾಸಗಿ ಉದ್ಯಮವನ್ನು ತೊಡಗಿಸಿಕೊಳ್ಳಲಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ಹೊಸ ಖರೀದಿ ಆದೇಶದಿಂದ ಸುಮಾರು ೧,೫೦೦ ಸಿಬ್ಬಂದಿಗೆ ಹೊಸ ಉದ್ಯೋಗಾವಕಾಶ ಒದಗಿಸಲಿದ್ದು ಮತ್ತು ೧೦೦ ಎಂಎಸ್ ಎಂಇಗಳಲ್ಲಿ ೩,೦೦೦ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿ ಮಾಡಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.