ಬೀದರ,ಸೆ 27: ಸೈನಿಕ ಶಾಲೆ ಬೀದರ ಜಿಲ್ಲೆಗೆ ಮಂಜೂರಾಗಿರುವ
ಹಿನ್ನೆಲೆಯಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಹಾಗೂ ಅವರ ಆಡಳಿತ ಮಂಡಳಿಯ ಸರ್ವ ಸದಸ್ಯರು, ಕೇಂದ್ರ ಸಚಿವ ಹಾಗೂ ಬೀದರ ಕ್ಷೇತ್ರದಸಂಸದ ಭಗವಂತ ಖೂಬಾ ಅವರ ಮನೆಗೆ ತೆರಳಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ
ಕೇಂದ್ರ ಸಚಿವರು ಮಾತನಾಡಿ, ನಮ್ಮ ಭಾಗದ ಅಭಿವೃದ್ದಿಯ
ಜವಾಬ್ದಾರಿ ನನ್ನ ಮೇಲಿದೆ, ಆದರೆ ನನ್ನ ಜೊತೆ ಎಚ್.ಕೆ.ಇ. ಸೊಸೈಟಿಯ
ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯ
ಸದಸ್ಯರುಗಳು ಹಾಗೂ ಎಲ್ಲರೂ ನೀಡಿರುವ ಸಹಕಾರದಿಂದ ಇದು
ಸಾಧ್ಯವಾಗಿದೆ.ಶೀಘ್ರದಲ್ಲಿ ಎಲ್ಲಾ ಪ್ರಕ್ರಿಯೆಗಳು ಮುಗಿಸಿಕೊಳ್ಳಿ,
ಅದ್ಧೂರಿಯಾಗಿ ರಕ್ಷಣಾ ಸಚಿವರ ನೇತೃತ್ವದಲ್ಲಿ ಶಿಲಾನ್ಯಾಸ
ಸಮಾರಂಭವನ್ನು ಮಾಡೋಣವೆಂದು ತಿಳಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಉಪಾದ್ಯಕ್ಷ ಡಾ. ಶರಣಬಸಪ್ಪಹರವಾಳ ಕಾರ್ಯದರ್ಶಿಡಾ. ಜಗನ್ನಾಥ ಬಿಜಾಪೂರ, ಜಂಟಿಕಾರ್ಯದರ್ಶಿಡಾ. ಮಹಾದೇವಪ್ಪ ಆಡಳಿತ ಮಂಡಳಿಯಸದಸ್ಯರಾದ ಡಾ. ರಜನೀಶ ವಾಲಿ, ಎಸ್.ಬಿ. ಕಾಮರೆಡ್ಡಿ, ಡಾ.
ನಾಗೇಂದ್ರ ಮಂಠಾಳೆ, ಅರುಣಕುಮಾರ ಪಾಟೀಲ್, ಬಸವರಾಜ
ಖಂಡೆರಾವ, ವಿನಯ ಎಸ್. ಪಾಟೀಲ್, ಸೊಮನಾಥ ನಿಂಗುಡಗಿ, ಡಾ.
ಅನಿಲಕುಮಾರ ಪಟ್ಟಣ, ಎನ್. ಗಿರಿಜಾ ಶಂಕರ, ಡಾ. ವಿರೇಂದ್ರ ಪಾಟೀಲ್ ಡಾ.ಕೈಲಾಶ ಪಾಟೀಲ್, ಸಾಯಿನಾಥ ಪಾಟೀಲ್ ಹಾಗೂ ಕೆ.ಆರ್.ಈ ಟ್ರಸ್ಟ್
ಅಧ್ಯಕ್ಷರಾದ ಡಾ. ಬಸವರಾಜ ಪಾಟೀಲ್ ಅಷ್ಟೂರ ಉಪಸ್ಥಿತರಿದ್ದರು.