ಎಚ್‍ಐವಿ, ಕ್ಷಯರೋಗ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ: ದತ್ತಾತ್ರೇಯ ಮೇಧಾ

ಬೀದರ:ಆ.3:ಕ್ಷಯರೋಗ ಮತ್ತು ಎಚ್‍ಐವಿ ನಿರ್ಮೂಲನೆ ಗೊಳಿಸಲು ಸರಕಾರ ದೊಂದಿಗೆ ಸಮಾಜದ ಎಲ್ಲಾ ಜನರ ಸಹಭಾಗಿತ್ವ ಅಗತ್ಯವಾಗಿದೆ ಎಂದು ಬೀದರ ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ದತ್ತಾತ್ರೇಯ ಮೇಧಾ ಅವರು ನುಡಿದರು.

ಅವರು ಇಂದು ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂ ತ್ರಣ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕ್ಷಯರೋಗ/ಎಚ್‍ಐವಿ ಜಾಗೃತಿ ಮತ್ತು ತಪಾಸಣೆ ಶಿಬಿರವನ್ನು ಉದ್ಘಾಟಿಸಿ, ಮಾತನಾಡು ತ್ತಿದ್ದರು.

ಯಾವುದೇ ರೋಗವು ನಿರ್ಮೂಲನೆಗೊಳಲು ಆ ರೋಗದ ಬಗ್ಗೆ ಜಾಗೃತಿ ಮೂಡುವುದು ಅಗತ್ಯ ವಾಗಿದೆ. ಕ್ಷಯ ರೋಗವು ಸಂಪೂರ್ಣ ಗುಣಪಡಿಸುವ ರೋಗವಾಗಿರುವುದರಿಂದ ಇದನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ಸೂಕ್ತವಾದ ಚಿಕಿತ್ಸೆ ಪಡೆದುಕೊಳ್ಳಬೇಕು. ಎಚ್‍ಐವಿ ಸೋಂಕಿತ ವ್ಯಕ್ತಿಯು ಸಾಮಾನ್ಯರಂತೆ ಆರೋಗ್ಯ ವಂತನಾಗಿ ಬದುಕಲು ಉತ್ತಮವಾದ ಚಿಕಿತ್ಸಾ ಸೌಲಭ್ಯ ಸರಕಾರದ ವತಿ ಯಿಂದ ಉಚಿತವಾಗಿ ಎಲ್ಲೆ ಡೆಯೂ ಲಭ್ಯವಾಗಿರುತ್ತದೆ. ಸೋಂಕಿತರು ಈಗ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಕಾರಾಗೃಹದ ವೈದ್ಯಾಧಿಕಾರಿ ಗಳು ಮಾತನಾಡಿ, ಕಾರಾ ಗೃಹವು ಸುಧಾರಣಾ ಕೇಂದ್ರ ವಾಗಿದೆ. ಇಲ್ಲಿ ಎಲ್ಲ ರೀತಿಯ ಹಾಗೂ ಉತ್ತಮ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಇದ್ದು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿ ದರು.ಕ್ಷಯ ರೋಗ ನಿಯಂ ತ್ರಣ ಮೇಲ್ವಿಚಾರಕರಾದ ಶಿವಕುಮಾರ ಸ್ವಾಮಿಯವ ರು ಮಾತನಾಡಿ, ಕ್ಷಯ ರೋಗ ಒಂದು ಮೈಕ್ರೋ ಬ್ಯಾಕ್ಟೇರಿಯಂ ಟ್ಯೂಬ ಕ್ರ್ಲೋಸಿಸ್ ಎನ್ನುವ ರೋಗಾಣುವಿನಿಂದ ಹರಡುವುದಾಗಿದ್ದು, ಇದು ಶ್ವಾಸಕೋಶ ಮತ್ತು ಶ್ವಾಸ ಕೋಶ ರಹಿತ ಎರಡು ಬಗೆಯ ಸೋಂಕನ್ನು ಹರಡಬಹುದು. ಕ್ಷಯ ರೋಗ ಶೀಘ್ರವಾಗಿ ಪತ್ತೆ ಹಚ್ಚಿ ಸೂಕ್ತವಾದ ಚಿಕಿತ್ಸೆ ಯನ್ನು ನೀಡಿದಾಗ ಸಂಪೂರ್ಣ ಗುಣಮುಖ ವಾಗುತ್ತದೆ. ಕ್ಷಯ ರೋಗದ ಗುಣಲಕ್ಷಣಗಳು, ಸತತ ವಾಗಿ ಸುಮಾರು ಒಂದು ತಿಂಗಳಿನಿಂದ ಜ್ವರ ಬರು ವುದು ಕೆಮ್ಮು /ಕಫದಲ್ಲಿ ರಕ್ತ ಬೀಳುವುದು, ಹಸಿವು ಆಗದೆ ಇರುವುದು, ತೂಕ ಕಡಿಮೆಯಾಗುವುದು ಮುಂತಾದ ರೋಗಲಕ್ಷಣ ಗಳು ಕಂಡು ಬಂದಾಗ ಸಮೀಪದ ಎಲ್ಲಾ ಪ್ರಾಥ ಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆಗಳಲ್ಲಿ ಕಫ ಪರೀಕ್ಷೆ ಕ್ಷ ಕಿರಣ ಪರೀಕ್ಷೆ ಸಂಪೂರ್ಣ ಉಚಿತವಾಗಿ ರುತ್ತದೆ ಮತ್ತು ರೋಗವನ್ನು ಪತ್ತೆ ಹಚ್ಚಿದಲ್ಲಿ ಗುಣಮುಖ ವಾಗುವವರೆಗೆ ಉಚಿತ ಔಷಧದೊಂದಿಗೆ ಉಪ ಚಾರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಸಂಜುಕುಮಾರ್ ಅವರು ಕ್ಷಯ ರೋಗದ ಮಾಹಿತಿ ಮತ್ತು ಸಂಪೂರ್ಣ ಸೇವಾ ಸೌಲಭ್ಯಗಳ ವಿವರವನ್ನು ನೀಡಿದರು.

ಐಸಿಟಿಸಿ ಪ್ರಯೋಗಶಾಲಾ ತಂತ್ರಜ್ಞರಾದ ಅರವಿಂದ್ ಕುಲಕರ್ಣಿ ಮಾತನಾಡಿ, ಎಚ್‍ಐವಿ ರೋಗವು ಕೇವಲ ನಾಲ್ಕು ವಿಧಾನದಿಂದ ಹರಡುವ ರೋಗ ವಾಗಿದ್ದು ಇದನ್ನು ಪ್ರತಿಯೊಬ್ಬರು ತಿಳಿದು ಕೊಂಡಾಗ ಈ ರೋಗ ಹರಡದಂತೆ ತಡೆ ಯಲು ಸಾಧ್ಯವಾಗುತ್ತದೆ. ಅಸುರಕ್ಷಿತ ಲೈಂಗಿಕ ಸಂಬಂಧ, ಸೋಂಕಿತ ವ್ಯಕ್ತಿ ಯ ರಕ್ತವನ್ನು ಪಡೆಯುವು ದರಿಂದ, ಸಂಸ್ಕರಿಸಲ್ಪಡದ ಸೂಜಿ ಮತ್ತು ಸಿರಂಜು ಗಳನ್ನು ಬಳಸುವುದರಿಂದ, ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಹರಡುತ್ತದೆ. ಎಚ್‍ಐವಿ ರೋಗವು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದ್ದಲ್ಲಿ ಹೊಸ ಪ್ರಕರಣ ಗಳು ಪತ್ತೆಯಾಗದಂತೆ ಮತ್ತು ಇದನ್ನು ಸಂಪೂರ್ಣ ನಿರ್ಮೂ ಲನೆ ಗೊಳಿಸಲು ಸಾಧ್ಯವಾಗು ತ್ತದೆ ಎಂದು ತಿಳಿಸಿದರು. ಇದೇ ಸಂದರ್ಭ ದಲ್ಲಿ ಕ್ಷಯ ರೋಗ ಕುರಿತು “”ಹೆದರದಿರು ತಮ್ಮ ಹೆದರ ದಿರು, ಕ್ಷಯ ರೋಗ ದಿಂದ ನೀ ಹೆದರದಿರು, ಡಾಟ್ಸ್ ಚಿಕಿತ್ಸಾ ಪದ್ಧತಿ ಒಂದೈತೆ ಅದು ಶಾಶ್ವತ ವಾಗಿ ಗುಣಪಡಿಸು ತ್ತೈತೆ”” ಎನ್ನುವ ಸ್ವರಚಿತ ಜಾಗೃತಿ ಗೀತೆಯನ್ನು ಹಾಡಿದರು. ಡಿಎ???ರ್‍ಸಿ ಆಪ್ತ ಸಮಾ ಲೋಚಕಿಯಾದ ಲಕ್ಷ್ಮಿ ವೈದ್ಯ ರವರು ಲೈಂಗಿಕ ಸೋಂಕಿನ ಬಗ್ಗೆ ಸವಿಸ್ತಾರ ವಾಗಿ ತಿಳಿಸಿದರು. ಇದೇ ಸಂದರ್ಭ ದಲ್ಲಿ ಎಚ್‍ಐವಿ ಮತ್ತು ಸಿಪಿಲಿಸ್ ಪರೀಕ್ಷೆ ಮಾಡಲಾಯಿತು . ಕಾರ್ಯಕ್ರಮ ಗೌತಮ್ ರವರು ಸ್ವಾಗತಿಸಿ ಕೋರಿ, ನಿರೂಪಿ ಸಿದರು. ಕಾರಾಗೃಹದ ಜೈಲರ್ ಸಿದ್ದಣ್ಣ ಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.