
(ಸಂಜೆವಾಣಿ ವಾರ್ತೆ)
ಔರಾದ್:ಆ.20: ಎಚ್‍ಐವಿ ಏಡ್ಸ್ ರೋಗಿಗಳಿಗೂ ಸಮಾಜದಲ್ಲಿ ಸಾಮಾನ್ಯ ಜನರಂತೆ ಬದುಕುವ ಹಕ್ಕಿದೆ ಇದಕ್ಕಾಗಿ ಎ???ವಿ ಏಡ್ಸ್ ಸೋನ್ನೆಗೆ ತರಲು ಜನ ಸಾಮಾನ್ಯರು ಮತ್ತು ಎಲ್ಲಾ ಇಲಾಖೆಗಳು ಕೈಜೋಡಿಸಬೇಕು ಎಂದು ಸಂತಪುರ್ ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿ ಡಾ. ರೇಣುಕಾ ನಾಗರಾಳಕರ ಹೇಳಿದರು.
ತಾಲ್ಲೂಕಿನ ಸಂತಪೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಹಾಗೂ ಲಾಲ್ ಬಹದ್ದೂರ ಶಿಕ್ಷಣ ಸಂಸ್ಥೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಸಂಪರ್ಕ ಕಾರ್ಯಕರ್ತ ಯೋಜನೆ ಅಂಗವಾಗಿ ನಡೆದ ವಕಾಲತ್ತು ವಹಿಸುವಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅನೈತಿಕ ದೈಹಿಕ ಸಂಬಂಧದಿಂದ ಏಡ್ಸ್ ಸೋಂಕು ಹರಡಬಹುದು. ಮುಂಜಾಗ್ರತಾ ಕ್ರಮಗಳಿಂದ ಇದನ್ನು ತಡೆಗಟ್ಟಬಹುದಾಗಿದೆ. ಏಡ್ಸ್ ಗುಣಲಕ್ಷಣಗಳು ಹಾಗೂ ನಿಯಂತ್ರಣಕ್ಕೆ ಕೈಗೆuಟಿಜeಜಿiಟಿeಜಳ್ಳಬೇಕಾದ ಕ್ರಮಗಳ ಬಗ್ಗೆ, ಜನರಲ್ಲಿ ಏಡ್ಸ್ ಆಂದೋಲನ ಹಮ್ಮಿ???ಂಡು ಅರಿವು ಮೂಡಿಸುವ ಪ್ರಯತ್ನ ಎಲ್ಲರಿಂದಲೂ ಆಗಬೇಕು. ಇಂದಿನ ಯುವಕರು ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಹಂತದಲ್ಲಿ ಏಡ್ಸ್ ತಡೆಗಟ್ಟುವಿಕೆಯಲ್ಲಿ ಎಚ್ಚೆತ್ತಕೊಂಡರೆ, ಆರೋಗ್ಯವಂತ ಸಮಾಜ ಸಾಧ್ಯ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕದ ಜಿಲ್ಲಾ ಮೇಲ್ವಿಚಾರಕ ಸುರ್ಯಕಾಂತ ಅವರು ಮಾತನಾಡಿ, ಸಂಪರ್ಕ ಕಾರ್ಯಕರ್ತ ಯೋಜನೆಯು ಬೀದರ ಜಿಲ್ಲೆಯಲ್ಲಿ 100 ಅಪಾಯದ ಅಂಚಿನ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಅಪಾಯ ಅಂಚಿನ ಗುಂಪುಗಳಾದ ದಮನಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರರು, ವಲಸೆ ಕಾರ್ಮಿಕರು, ಲಾರಿ ಚಾಲಕರು, ಎ???ವಿಯೂಂದಿಗೆ ಬದುಕುತ್ತಿರುವ ಹಾಗೂ ಗರ್ಭಿಣಿ ಮಹಿಳೆಯರಲ್ಲಿ ಎ???ವಿ ಸ್ಧಿತಿಗತಿಯನ್ನು ತಿಳಿಯುವದರ ಜೋತೆಗೆ ಅವರ ಆರೋಗ್ಯದ ಕಾಳಜಿ ವಹಿಸುವ ಯೋಜನೆಯಾಗಿದ್ದು ಆದ್ದರಿಂದ ಸಮುದಾಯದ ಎಲ್ಲಾ ಜನರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೈಜೋಡಿಸಿ ಎ???ವಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿ ಎ???ವಿ ಮುಕ್ತ ದೇಶಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯ ವಿಶ್ವನಾಥ್ ಸ್ವಾಮಿ ಮಾತನಾಡಿ, ಎ???ವಿ ಏಡ್ಸ್ ಬಗ್ಗೆ ಜನರಲ್ಲಿರುವ ಆತಂಕವನ್ನು ದೂರಮಾಡಿ, ಮುಕ್ತವಾಗಿ ಜನರು ಏಡ್ಸ್ ಬಗ್ಗೆ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಎ???ವಿ ಏಡ್ಸ್ ಪಿಡಿತರೂಂದಿಗೆ ಮುಕ್ತವಾಗಿ ಬದುಕಲು ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಕಾರ್ಯಕರ್ತರು ಜೋತೆಗೂಡಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಬಸವರಾಜ ಸ್ವಾಮಿ, ಸಿದ್ರಾಮ ಬ್ಯಾಳೆ, ಆಪ್ತ ಸಮಾಲೋಚಕಿ ಸುನಿತಾ, ಪಾಶಾ ಜ್ಯೋತಿ, ಆನಂದ, ಅಶೋಕ ಪಾಂಚಾಳ, ಅನೀಲ ರೆಡ್ಡಿ, ಕಾರ್ತಿಕ್ ಸ್ವಾಮಿ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.