ಎಚ್‍ಐವಿ ಏಡ್ಸ್ ಅರಿವು ಕಾರ್ಯಕ್ರಮ

ಔರಾದ :ಮಾ.1: ಯೌವನಾವಸ್ಥೆಯಲ್ಲಿ ಯುವಸಮೂಹ ಮನಸ್ಸು ನಿಯಂತ್ರಿಸಿಕೊಂಡು ಏಡ್ಸ್ ಎಂಬ ಮಾರಕ ಕಾಯಿಲೆಯಿಂದ ದೂರವಿರಬೇಕು ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಮಣ ಪೆÇೀಕಲವಾರ್ ಹೇಳಿದರು.

ಪಟ್ಟಣದ ಬಸವೇಶ್ವರ ಡಿ.ಎಲ್.ಇಡಿ ಕಾಲೇಜಿನಲ್ಲಿ ಸೋಮವಾರ ನಡೆದ ಎಚ್‍ಐವಿ ಏಡ್ಸ್ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಕಾಯಿಲೆ ಕುರಿತು ವಿದ್ಯಾರ್ಥಿ ಸಮೂಹ ಹಾಗೂ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ. ರೋಗ ಬಂದ ನಂತರ ಪರಿತಪಿಸುವ ಬದಲು ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಎಚ್‍ಐವಿ ಸೊಂಕು ಪತ್ತೆಯಾದ ನಂತರ ಕುಗ್ಗಿ ಹೋಗದೇ ಅದಕ್ಕೆ ಪರಿಹಾರ ಕಂಡುಕೊಂಡು ಬದುಕಬೇಕು ಎಂದರು.

ಆರೋಗ್ಯ ಇಲಾಖೆ ಆಪ್ತ ಸಮಾಲೋಚಕಿ ಪುಷ್ಪಾಂಜಲಿ ಪಾಟೀಲ್ ಮಾತನಾಡಿ, ಏಡ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯವಾಗಿದೆ. ಏಡ್ಸ್ ರೋಗದ ಹರಡುವಿಕೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ಜನರಲ್ಲಿ ಆತ್ಮವಿಶ್ವಾಸ ಮೂಡಿಸಿ ಸ್ವಯಂ ಪ್ರೇರಿತ ಪರೀಕ್ಷೆಗೆ ಸಾರ್ವಜನಿಕರು ಮುಂದಾಗಬೇಕು ಎಂದರು.

ಸಂಪನ್ಮೂಲ ಶಿಕ್ಷಕ ಬಾಲಾಜಿ ಅಮರವಾಡಿ ಮಾತನಾಡಿದರು. ಪ್ರಾಚಾರ್ಯ ಶರಣಪ್ಪ ನೌಬಾದೆ ಪ್ರಾಸ್ತಾವಿಕ ಮಾತನಾಡಿದರು. ಹಿರಿಯರಾದ ಮನ್ಮತಪ್ಪ ಹುಗ್ಗೆ ಅಧ್ಯಕ್ಷತೆ ವಹಿಸಿದ್ದರು. ಸತೀಶ ಗಂದಿಗುಡೆ, ಇಂದುಮತಿ ಎಡವೆ, ಅಂಬಿಕಾ, ಅಮರ ದ್ಯಾಡೆ, ಸುರೇಖಾ ಮೆಂಗಾ, ನಾಗನಾಥ ಶಂಕು, ಸಂಜೀವ ವಲಾಂಡೆ, ರೇಖಾ ನೌಬಾದೆ, ವಾಮನ ಮಾನೆ, ಅಮರ ನಿಸ್ಪತೆ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.