
(ಸಂಜೆವಾಣಿ ವಾರ್ತೆ)
ಔರಾದ :ಮಾ.6: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಎಚ್‍ಐವಿ ಏಡ್ಸ್ ಕುರಿತು ಅರಿವು ಜಾಗೃತಿ ಕಾರ್ಯಕ್ರಮ ಜರುಗಿತು.
ಸರ್ಕಾರಿ ಆಸ್ಪತ್ರೆಯ ಸಮಾಲೋಚಕ ಕೃಷ್ಣ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎಚ್‍ಐವಿ ಏಡ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯವಾಗಿದ್ದು, ಏಡ್ಸ್ ರೋಗದ ಹರಡುವಿಕೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿ, ಜನರಲ್ಲಿ ಆತ್ಮವಿಶ್ವಾಸ ಮೂಡಿಸಿ ಸ್ವಯಂ ಪ್ರೇರಿತ ಪರೀಕ್ಷೆಗೆ ಸಾರ್ವಜನಿಕರು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಲಕ್ಷ್ಮಣ ಕಾಂಬಳೆ ಅಧ್ಯಕ್ಷತೆ ವಹಿಸಿದರು, ಡಾ. ಹೇಮಾವತಿ ಪಾಟೀಲ, ಅಬ್ದುಲ ಅಮೀರ್ ಪಟೇಲ, ಸಿಂಧೂ ಎನ್.ಕೆ, ರೆಡ್ ರಿಬ್ಬನ್ ಕ್ಲಬ್ ಸಂಯೋಜಕ ಡಾ.ರವಿ ಮೇಟಿ ನಿರೂಪಿಸಿದರು, ಅಶೋಕ ಭಂಡಾರಿ ವಂದಿಸಿದರು.