ಎಚ್‌ಎಸ್‌ಆರ್ ನಂಬರ್ ಪ್ಲೇಟ್ ಅಳವಡಿಕೆಗೆ ೩ ತಿಂಗಳು ಕಾಲಾವಕಾಶ

ಬೆಂಗಳೂರು, ಫೆ.೧೪-ರಾಜ್ಯದಲ್ಲಿ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (ಹೆಚ್ ಎಸ್ ಆರ್) ನಂಬರ್ ಪ್ಲೇಟ್ ಅಳವಡಿಸುವುದಕ್ಕೆ ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿಧಾನಪರಿಷತ್ತಿನಲ್ಲಿ ತಿಳಿಸಿದರು.
ರಾಜ್ಯದಲ್ಲಿ ಈಗಾಗಲೇ ೧೮ ಲಕ್ಷ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದ್ದು,ಉಳಿದ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಲು ಮೂರು ತಿಂಗಳ ಕಾಲಾವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಸುವುದು ಅನ್ ಲೈನ್ ನಲ್ಲಿ ಮಾಡಿಕೊಳ್ಳುವ ನಗದು ರಹಿತ ಪಾರದರ್ಶಕ ವ್ಯವಸ್ಥೆಯಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ನ ಮಧು ಜಿ. ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಸುವ ನಕಲಿ ವೆಬ್ ಸೈಟ್ ಗಳ ಬಗ್ಗೆ ನಿಗಾ ವಹಿಸಲಾಗಿದ್ದು,ಅಂತಹುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಅತಿ ಸುರಕ್ಷತಾ ನೋಂದಣಿ ಫಲಕಗಳ ಯೋಜನೆಯನ್ನು ಭದ್ರತೆಯ ದೃಷ್ಟಿಯಿಂದ ಕಡ್ಡಾಯವಾಗಿ ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ವಾಹನಗಳನ್ನು ಬಳಸಿಕೊಂಡು ಎಸಗುವ ಅಪರಾಧಗಳನ್ನು ತಡೆಗಟ್ಟುವುದು ಮತ್ತು ರಸ್ತೆಯ ಮೇಲೆ ಸಂಚರಿಸುವ ಎಲ್ಲಾ ವಾಹನಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.ಅಲ್ಲದೆ, ನೋಂದಣಿ ಫಲಕಗಳನ್ನು ವಿರೂಪಗೊಳಿಸುವ ಮತ್ತು ನಕಲಿ ನೋಂದಣಿ ಫಲಕಗಳನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ. ಪ್ರವರ್ತನ ಮತ್ತು ಭದ್ರತೆ ದೃಷ್ಟಿಯಿಂದ ಅತಿ ಸುರಕ್ಷಿತ ನೋಂದಣಿ ಫಲಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೇಂದ್ರ ಮೋಟಾರು ವಾಹನ ನಿಯಮಗಳು ೧೯೮೯ರ ನಿಯಮ ೫೦ ರಲ್ಲಿ ನಿಗದಿಪಡಿಸಿರುವಂತೆ ವಾಹನಗಳ ಮೇಲೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಅಳವಡಿಸಲು ಸೂಚಿಸಲಾಗಿರುತ್ತದೆ ಎಂದು ಹೇಳಿದರು.ನೋಂದಣಿ ಫಲಕವು ಅಲ್ಯೂಮಿನಿಯಂನಿಂದ ನಿರ್ಮಿತವಾದ “ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ರೇಟ್” ಆಗಿದ್ದು, ಮರುಬಳಕೆ ಮಾಡಲಾಗದ ಎರಡು ಲಾಕ್‌ಗಳನ್ನು ಬಳಸಿಕೊಂಡು ವಾಹನದ ಮೇಲೆ ಸ್ಥಿರವಾಗಿ ಅಳವಡಿಸಲಾಗುತ್ತದೆ. ನಕಲಿನಿಂದ ರಕ್ಷಿಸಲು ೨೦ ಎಂಎಂ x ೨೦ ಎಂಎಂ ಗಾತ್ರದ ಚಕ್ರದ ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ಅನ್ನು ಮುಂಭಾಗ ಮತ್ತು ಹಿಂಭಾಗದ ಎರಡೂ ಪ್ಲೇಟ್‌ಗಳ ಮೇಲಿನ ಎಡ ಮೂಲೆಯಲ್ಲಿ ಬಿಸಿ ಸ್ಯಾಂಪಿಂಗ್ ಮೂಲಕ ಅಳವಡಿಸಲಾಗುತ್ತದೆ ಎಂದು ವಿವರಿಸಿದರು..
ಕೇಂದ್ರ ಸರ್ಕಾರದ ಆದೇಶದನ್ವಯ ಎಲ್ಲಾ ರಾಜ್ಯಗಳಲ್ಲಿಯೂ ಅತಿ ಸುರಕ್ಷತಾ ನೋಂದಣಿ ಫಲಕಗಳನ್ನು ಅಳವಡಿಸಲಾಗುತ್ತಿದ್ದು, ಅದೇ ರೀತಿಯಾಗಿ ರಾಜ್ಯದಲ್ಲಿಯೂ ಸಹ ಫಲಕಗಳನ್ನು ಅಳವಡಿಸಲು ಆದೇಶಿಸಲಾಗಿರುತ್ತದೆ.ರಾಜ್ಯದಲ್ಲಿ ಏಪ್ರಿಲ್ ೨೦೧೯ಕ್ಕಿಂತ ಮೊದಲು ಅಂದಾಜು ೨.೪೫ ಕೋಟಿ ವಾಹನಗಳು ನೋಂದಣಿಯಾಗಿದ್ದು, ಸುಮಾರು ೨ ವಾಹನಗಳು ಅಸ್ತಿತ್ವದಲ್ಲಿವೆ.
ಮೇಲಿನ ಅಂಕಿ-ಅಂಶಗಳ ಪ್ರಕಾರ ಒಟ್ಟಾರೆ ಶೇ.೯.೧೬% ಪ್ರಮಾಣದ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ ಎಂದು ಉತ್ತರಿಸಿದರು.