ಎಚ್‍ಆರ್‍ಜಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲಿ:ಆನಂದ್ ಸಿಂಗ್


ಸಂಜೆವಾಣಿ ವಾರ್ತೆ
ಹೊಸಪೇಟೆ ಜ17: ಸುಖಾಸುಮ್ಮನೇ ಸಕ್ಕರೆ ಕಾರ್ಖಾನೆ ಮುಚ್ಚಲು ಆನಂದ್ ಸಿಂಗ್ ಕಾರಣರಾಗಿದ್ದಾರೆ ಎಂದು ಟೀಕೆ ಮಾಡುವ ಎಚ್.ಆರ್.ಗವಿಯಪ್ಪನವರು, ತಮ್ಮ ಸ್ವಂತ ಹಣದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ, ಮುಂದಿನ ಚುನಾವಣೆ ಎದುರಿಸಲಿ ಎಂದು ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್ ಸವಾಲು ಹಾಕಿದರು.
ನಗರದ ಅನಂತಶಯನ ಗುಡಿ ರೈಲ್ವೆ ಗೇಟ್ ಮೇಲ್ಸೇತುವೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗವಿಯಪ್ಪನವರು ಆಗರ್ಭ ಶ್ರೀಮಂತರು, 500 ಕೋಟಿ ರೂ ವೆಚ್ಚದಲ್ಲಿ ಸ್ಟೀಲ್ ಕಾರ್ಖಾನೆ ಸ್ಥಾಪನೆ ಮಾಡುವ ಬದಲು 250 ಕೋಟಿ ಹಣ ಖರ್ಚು ಮಾಡಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬಹುದಿತ್ತು. ಈ ಹಿಂದೆ ಅವರು, ನಗರದಲ್ಲಿ ಸೂಪರ್ ಸೆಪಾಲಿಟಿ ಆಸ್ಪತ್ರೆ ತೆರೆಯುವುದಾಗಿ ಭರವಸೆ ನೀಡಿದ್ದರು. ಎಚ್‍ಆರ್‍ಜಿ ಸಕ್ಕರೆ ಕಾರ್ಖಾನೆ ಮತ್ತು ಎಚ್‍ಆರ್‍ಜಿ ಸೂಪರ್ ಸೆಪಾಲಿಟಿ ಆಸ್ಪತ್ರೆ ಎರಡನ್ನು ತೆರೆಯಲಿ ಎಂದು ಒತ್ತಾಯಿಸಿದರು.
ಸಕ್ಕರೆ ಕಾರ್ಖಾನೆ ಮುಚ್ಚಲು ನಾನು ಕಾರಣನಲ್ಲ. ಕಾರ್ಖಾನೆ ಸ್ಥಗಿತದಿಂದ ಈ ಭಾಗದ ರೈತರಿಗೆ ತೊಂದರೆಯಾಗಿದೆ ಎಂಬುದು ನನಗೆ ಅರಿವಿದೆ. ಆದಕ್ಕಾಗಿ ನಾನು ನನ್ನ ಪ್ರಯತ್ನ ಬಿಟ್ಟಿಲ್ಲ. ಕಾರಿಗನೂರು ಬಳಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿ ನಾನು ಚುನಾವಣೆ ಎದುರಿಸುತ್ತೇನೆ. ಇಲ್ಲವಾದಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳುತೇನೆ ಎಂದರು.
ಕ್ಷೇತ್ರಕ್ಕೆ ಕೊಡುಗೆ ಏನಿದೆ:
ವಿಜಯನಗರ ಕ್ಷೇತ್ರಕ್ಕೆ ಅವರ ಕೊಡುಗೆ ಏನಿದೆ. ಚುನಾವಣೆ ಸಮಯದಲ್ಲಿ ಬರೋದು ಸೋತ ಕೂಡಲೇ ಮನೆ ಸೇರುತ್ತಾರೆ. ಮತ್ತೆ ಈಗ ಚುನಾವಣೆ ಬಂದಿದೆ ಹೊರಗೆ ಬಂದಿದ್ದಾರೆ. ಚುನಾವಣೆಯಲ್ಲಿ ಸೋತರೂ ಜನಪ್ರತಿನಿಧಿಗಳು ಜನರ ಮಧ್ಯ ಇರಬೇಕು. ಜನರ ಕಷ್ಟಸುಖಗಳಿಗೆ ಸ್ಪಂದಿಸಬೇಕು. ಅದು ಬಿಟ್ಟು ಮನೆಯಲ್ಲಿ ಕುಳಿತರೆ ಹೇಗೆ ಎಂದು ದೂರಿದ ಅವರು, ಕ್ಷೇತ್ರದ ಮತದಾರರು ದಡ್ಡರಲ್ಲ, ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರೇ ಉತ್ತರ ಕೊಡುತ್ತಾರೆ ಎಂದು ಹೇಳಿದರು. 
ಅಧಿಕಾರಕ್ಕೆ ಅಂಟಿಕೊಂಡಿಲ್ಲ:
ಅಧಿಕಾರಕ್ಕಾಗಿ ಅಂಟಿಕೊಂಡವನಲ್ಲ ನಾನು, ಕ್ಷೇತ್ರದಲ್ಲಿ ಕೆಲಸ ಮಾಡುತೇನೆ. ಜನರ ಬಳಿ ಹೋಗುತ್ತೇನೆ. ಜನ ತೀರ್ಮಾನ ಮಾಡುತ್ತಾರೆ. ಜನರ ತೀರ್ಪು ಅಂತಿಮವಾಗಲಿದೆ. ನಾನು ಏನಿದ್ದರೂ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಉತ್ತರ ನೀಡುತೇನೆ. ಈ ಚುನಾವಣೆ ಜನರೇ ಉತ್ತರಿಸಲಿದ್ದಾರೆ ಎಂದು ಹೇಳಿದರು.
ಕೀಳುಮಟ್ಟದ ರಾಜಕಾರಣ ಸಲ್ಲದು:ಯಾರೂ ಕೂಡ ಕೀಳು ಮಟ್ಟದ ರಾಜಕಾರಣ ಸಲ್ಲದು. ಕೆಲವರ ನನ್ನ ವಿರುದ್ಧ ಟೀಕೆ, ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ತಮ್ಮ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ಮುಖಂಡ ರಾಜಶೇಖರ್ ಹಿಟ್ನಾಳ್ ಅವರ ಹೆಸರು ಹೇಳದೇ ಟಾಂಗ್ ಕೊಟ್ಟರು.
ಹಂಪಿ ಶುಗರ್ಸ್ ಸ್ಥಾಪನೆ:
ಸಕ್ಕರೆ ಕಾರ್ಖಾನೆ ಮುಚ್ಚಲು ನಾನು ಕಾರಣನಲ್ಲ. ಕಾರ್ಖಾನೆ ಸ್ಥಗಿತದಿಂದ ಈ ಭಾಗದ ರೈತರಿಗೆ ತೊಂದರೆಯಾಗಿದೆ ಎಂಬುದು ನನಗೆ ಅರಿವಿದೆ. ಆದಕ್ಕಾಗಿ ನಾನು ನನ್ನ ಪ್ರಯತ್ನ ಬಿಟ್ಟಿಲ್ಲ. ಕಾರಿಗನೂರು ಬಳಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿ ನಾನು ಚುನಾವಣೆ ಎದುರಿಸುತ್ತೇನೆ. ಇಲ್ಲವಾದಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳುತೇನೆ ಎಂದು ಸವಾಲು ಹಾಕಿದರು.
ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ್, ಹುಡಾ ಅಧ್ಯಕ್ಷ ಅಶೋಕ್ ಜೀರೆ, ನಗರಸಭೆ ಸದಸ್ಯರಾದ ರೂಪೇಶ್ ಕುಮಾರ್, ಕನಕಮ್ಮ ಮುಖಂಡರಾದ ಬಾಬುಲಾಲ್ ಜೈನ್, ವೈ,ಯಮುನೇಶ್ ಇತರರು ಪಾಲ್ಗೊಂಡಿದ್ದರು.