ಎಗ್ ಚಿಲ್ಲಿ

ಬೇಕಾಗುವ ಸಾಮಗ್ರಿಗಳು

*ಮೊಟ್ಟೆ – ೪
*ಕಾರ್ನ್ ಫ್ಲೋರ್ – ೧೫೦ ಗ್ರಾಂ
*ಮೈದಾ – ೧೦೦ ಗ್ರಾಂ
*ಅಚ್ಚ ಖಾರದ ಪುಡಿ – ೨ ಚಮಚ
*ಈರುಳ್ಳಿ – ೨
*ನಿಂಬೆಹಣ್ಣು – ೧
*ಎಣ್ಣೆ – ೫೦ ಗ್ರಾಂ
*ಬೆಳ್ಳುಳ್ಳಿ ಪೇಸ್ಟ್ – ೨ ಚಮಚ
*ದಪ್ಪ ಮೆಣಸಿನಕಾಯಿ – ೧
*ಶುಂಠಿ ಪೇಸ್ಟ್ – ೧ ಚಮಚ
*ಸೋಯಾ ಸಾಸ್ – ೨ ಚಮಚ
*ಚಿಲ್ಲಿ ಸಾಸ್ – ೨ ಚಮಚ
*ಕೊತ್ತಂಬರಿ ಸೊಪ್ಪು – ೨ ಚಮಚ

ಮಾಡುವ ವಿಧಾನ:

ಒಂದು ಬೌಲ್ ಗೆ ಜೋಳದ ಹಿಟ್ಟು, ಮೈದಾ ಹಿಟ್ಟು, ಅಚ್ಚಖಾರದ ಪುಡಿ, ಉಪ್ಪು, ನೀರು ಹಾಕಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಬೇಯಿಸಿದ ಮೊಟ್ಟೆಯನ್ನು ಮಧ್ಯಕ್ಕೆ ಕಟ್ ಮಾಡಿ ಕಲಸಿಕೊಂಡ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿದು ಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಹುರಿದು, ಬೆಳ್ಳುಳ್ಳಿ ಪೇಸ್ಟ್, ದಪ್ಪ ಮೆಣಸಿನಕಾಯಿ, ಸೋಯಾ ಸಾಸ್, ರೆಡ್ ಚಿಲ್ಲಿ ಸಾಸ್, ಉಪ್ಪು ಹಾಕಿ ಮಿಕ್ಸ್ ಮಾಡಿ ಕರಿದ ಮೊಟ್ಟೆ, ನಿಂಬೆರಸ, ಕೊತ್ತಂಬರಿ ಸೊಪ್ಪು ಹಾಕಿ ಕಲಸಿದರೆ ಎಗ್ ಚಿಲ್ಲಿ ಸವಿಯಲು ಸಿದ್ಧ.