ಎಗ್ಗಿಲ್ಲದೆ ಸಾಗಿದ ಮಧ್ಯ, ಮಾಂಸ ಮಾರಾಟ


ಗ್ರಾ.ಪಂ.ಚುನಾವಣೆ : ಕಣ್ಮುಚ್ಚಿಕುಳಿತ ಅಧಿಕಾರಿಗಳು

ಲಿಂಗಸುಗೂರು.ಡಿ.೨೩- ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆಲ್ಲಿ ಆಕ್ರಮ ಚಟುವಟಿಕೆಗಳು ವಿಪರೀತವಾಗಿದ್ದು, ಚುನಾವಣಾ ಅಧಿಕಾರಿ ಹಾಗೂ ಅಬಕಾರಿ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತ್ತಿರುವುದು ವಿಪರ್ಯಸವಾಗಿದೆ.
ತಾಲೂಕಿನ ಗೋನಾವಾಟ್ಲಾ, ಗುಂತಗೋಳ, ಕಾಳಾಪೂರು, ಗೊರೆಬಾಳ, ಮಾವಿನಭಾವಿ, ಅನಾಹೊಸೂರು, ಈಚನಾಳ, ರೋಡಲಬಂಡಾ (ಯುಕೆಪಿ) ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸ್ಪರ್ಧಿಗಳು ಮತದಾರರನ್ನು ಸೆಳೆಯಲು ಹಲವು ತಂತ್ರಗಳನ್ನು ಬಳುಸುತ್ತಿದ್ದಾರೆ.
ಒಂದು ಕುಟುಂಬದಲ್ಲಿ ೨ ಮತಗಳಿದ್ದರೆ, ಒಂದು ಕೆಜಿ ಚಿಕ್ಕನ್ ಒಂದು ಕ್ವಾಟರ್ ಎಣ್ಣೆ ಹಾಗೂ ೩ ಮತದಾರರು ಇದ್ದರೆ ೨ ಕೆಜಿ ಚಿಕ್ಕನ್ ೨ ಕ್ವಾಟರ್ ಎಣ್ಣೆ ಹಂಚಲಾಗುತ್ತಿದೆ.
ಪ್ರತಿಯೊಂದು ಗ್ರಾಮಗಳಲ್ಲಿ ಹೋಟಲ್, ಪಾನ್ ಬೀಡಾ ಅಂಗಡಿ, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಬಲು ಜೋರಾಗಿ ಸಾಗಿದೆ. ಗ್ರಾಮದ ಯುವಕರು ಮುಂಜಾನೆ ಮಧ್ಯದ ಅಮಲಿನಲ್ಲಿ ತೇಲಾಡುತ್ತಿದ್ದಾರೆ. ಇನ್ನೊಂದು ಕಡೆ ಕುಗ್ರಾಮ ಹಾಗೂ ತಾಂಡಗಳಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟವು ಎಗ್ಗಿಲ್ಲದೇ ಸಾಗಿದೆ. ಇದರಿಂದಾಗಿ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿರುವುದು ಮಾತ್ರ ವಿಷಾದನೀಯ ಸಂಗತಿಯಾಗಿದೆ. ಹಗಲಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದರು, ಅಬಕಾರಿ ಅಧಿಕಾರಿಗಳು ಅಕ್ರಮ ಮಧ್ಯಮಾರಾಟಕ್ಕೆ ಸಾಥ್ ನೀಡುತ್ತಿದ್ದಾರೆ.
ಕೊರೋನಾ ವೈರಸ್‌ನಿಂದ ಕಂಗೆಟ್ಟಿದ ಮಾಂಸ ಮಾರಾಟದ ವ್ಯಾಪಾರಸ್ಥರಿಗೆ ಗ್ರಾಮ ಪಂಚಾಯತಿ ಚುನಾವಣೆಯು ಅವರಿಗೆ ಸುಗ್ಗಿಯನ್ನು ತಂದುಕೊಟ್ಟಿದೆ. ಕಳೆದರಡು ದಿನಗಳಿಂದ ಚಿಕ್ಕನ್ ಮಾರಾಟ ಹೆಚ್ಚಾಗಿದೆ.
ಚುನಾವಣೆ ಮೊದಲು ಪ್ರತಿಯೊಂದು ಅಂಗಡಿಗಳಲ್ಲಿ ದಿನಕ್ಕೆ ೫೦ ರಿಂದ ೧೦೦ ಕೆಜಿ ಮಾರಾಟವಾಗುತ್ತಿತ್ತು. ಆದರೆ ಈಗ ದಿನಕ್ಕೆ ೨೦೦ ರಿಂದ ೩೦೦ ಕೆಜಿ ಚಿಕ್ಕನ್ ಮಾರಾಟವಾಗುತ್ತಿದೆ ಇದರಿಂದಾಗಿ ವ್ಯಾಪಾರಸ್ಥರು ಬೆಳಿಗ್ಗೆ ೫ ಘಂಟೆಯಿಂದಲ್ಲೇ ವ್ಯಾಪಾರ ಮಾಡಲು ಶುರುವಿಟ್ಟುಕೊಂಡಿದ್ದಾರೆ.
ಪ್ರತಿದಿನ ೧೨ ಘಂಟೆಯಾಗುತ್ತಿದ್ದಂತೆ ಡಾಬಾ ಹಾಗೂ ಮಧ್ಯದ ಅಂಗಡಿಗಳು ತುಂಬಿ ತುಳುಕುತ್ತಿವೆ. ಅತಿ ಹೆಚ್ಚು ಯುವಕರೇ ಡಾಬಾ ಹಾಗೂ ಮಧ್ಯದ ಅಂಗಡಿಗಳಲ್ಲಿ ಕುಳಿತುಕೊಂಡು ಮಧ್ಯದ ಅಮಲಿನಲ್ಲಿ ತೇಲಾಡುತ್ತಿದ್ದಾರೆ. ಒಟ್ಟಿನಲ್ಲಿ ತಾಲೂಕಿನಲ್ಲಿ ಮಾಂಸ ಹಾಗೂ ಮಧ್ಯದ ಎಣ್ಣೆ ಅಂಗಡಿಯಲ್ಲಿ ವ್ಯಾಪಾರವಹಿವಾಟು ಹೆಚ್ಚಾಗಿದೆ.
ಕೈಕಟ್ಟಿ ಕುಳಿತ ಚುನಾವಣಾಧಿಕಾರಿ:
ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಿಂದಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಚುನಾವಣೆ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳದೇ ಕೈಕಟ್ಟಿಕೊಂಡು ಕುಳಿತ್ತಿದ್ದಾರೆ. ಅಲ್ಲದೇ ವಿವಿಧ ರಾಜಕೀಯ ಪಕ್ಷಗಳು ನೇರವಾಗಿ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾರೆ. ಅವರನ್ನು ನಿಯಂತ್ರಿಸುವಲ್ಲಿಯು ಸಹ ಅಧಿಕಾರಿಗಳು ವಿಫಲರಾಗಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಧಿಕಾರಿಗಳೇ ಪರೋಕ್ಷವಾಗಿ ಚುನಾವಣಾ ಅಕ್ರಮಗಳಿಗೆ ಸಾಥ್ ನೀಡುತ್ತಿರುವುದು ವಿಷಾದನೀಯ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಿಸ್ಪಕ್ಷಪಾತ ಚುನಾವಣೆ ನಡೆಸಬೇಕೆಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.
ಫೋಟೊ.ನಂ.೦೧- ಪಟ್ಟಣದ ಚಿಕ್ಕನ್ ಅಂಗಡಿಯಲ್ಲಿ ಚಿಕ್ಕನ್ ಖರೀದಿಗಾಗಿ ಮುಗಿಬಿದ್ದ ಸ್ಪರ್ಧಿಗಳು.