ಎಗ್ಗಿಲ್ಲದೆ ಸಾಗಿದೆ ಸೆಂಟ್ರಲ್ ವಿಸ್ಟಾ


ನವದೆಹಲಿ, ಮೇ ೨೬-ದೇಶದ ರಾಜಧಾನಿ ಮಧ್ಯಭಾಗದಲ್ಲಿರುವ ರಾಜ್‌ಪಥ್‌ನಿಂದ ದೆಹಲಿಯ ಸೆಂಟ್ರಲ್ ಪಾರ್ಕ್‌ವರೆಗೆ ವಿಶಾಲವಾದ ಚೌಲೆವಾರ್ಡಿನ ಎರಡೂ ಬದಿಯಲ್ಲಿರುವ ಅಂದವಾದ ಹುಲ್ಲುಗಾವಲು ಚಳಿಗಾಲದಲ್ಲಿ ಸೂರ್ಯನ ಮೊರೆ ಹೋಗಲು ಅಥವಾ ಬೇಸಿಗೆಯ ಸುಂದರ ಸಂಜೆಯಲ್ಲಿ ಐಸ್ ಕ್ರೀಂ ಮೆಲ್ಲುತ್ತಾ ಅತ್ತಿಂದಿತ್ತ ಸಂಚರಿಸಲು ಇಂದು ಅತ್ಯಂತ ಸೂಕ್ತ ಸ್ಥಳ ಎಂಬುದರಲ್ಲಿ ಎರಡು ಮಾತಿಲ್ಲ.
ರಾಷ್ಟ್ರಪತಿ ಭವನದಿಂದ ಒಂದು ತುದಿಯಲ್ಲಿರುವ ಇಂಡಿಯಾ ಗೇಟ್ ಯುದ್ಧ ಸ್ಮಾರಕದ ಇನ್ನೊಂದು ತುದಿಯ ಮೂರು ಕಿ.ಮೀ ಉದ್ದದ ರಸ್ತೆ ಈಗ ಸಂಪೂರ್ಣ ಧೂಳುಮಯವಾಗಿದೆ.
ಈ ಪ್ರದೇಶ ಹಳ್ಳ ಮತ್ತು ಮಣ್ಣಿನ ದಿಬ್ಬಗಳಿಂದ ಕೂಡಿದೆ. ಇಲ್ಲಿ ಹಾಕಲಾಗಿರುವ ಬ್ಯಾರಿಕೇಡ್‌ಗಳು ಹಾಕಲಾಗಿದೆ ಹಳದಿ ಮಣ್ಣಿನ ಧೂಳು ಕಣ್ಣಿಗೆ ರಾಚುತ್ತಿವೆ. ಅಲ್ಲಲ್ಲಿ ಕೊಳವೆ ಪೈಪ್‌ಗಳನ್ನು ಅಳವಡಿಸುವ ಕಾರ್ಯವೂ ನಡೆಯುತ್ತಿದೆ.
ಅಷ್ಟಕ್ಕೂ ಇವೆಲ್ಲ ಕಾಮಗಾರಿಗಳು ಏಕೆ ನೆಡಯುತ್ತಿವೆ ಎಂಬುದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದು ಸೆಂಟ್ರಲ್ ವಿಸ್ಟಾ ಯೋಜನೆಗಾಗಿ ನಡೆಯುತ್ತಿರುವ ಕಾಮಗಾರಿಗಳು. ಇಲ್ಲಿ ಹೊಸ ಸಂಸತ್ ಭವನ ತಲೆಯೆತ್ತಲಿದೆ. ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರಿಗೆ ಹೊಸ ನಿವಾಸ ಮತ್ತು ಬಹುಮಹಡಿ ಕಚೇರಿಗಳನ್ನು ಒಳಗೊಂಡಿರುವ ವಿಶಾಲವಾದ ಪುನರ್ ಅಭಿವೃದ್ದಿ ಯೋಜನೆ ಇದಾಗಿದೆ.
ಈ ಸೆಂಟ್ರಲ್ ವಿಸ್ಟಾ ಕಟ್ಟಡ ೨೦೦ ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಈ ಯೋಜನೆ೨೦೧೯ ರಲ್ಲಿ ಘೋಷಣೆಯಾದಾಗಿನಿಂದ ವಿವಾದಕ್ಕೆ ಸಿಲುಕಿದೆ. ಇಷ್ಟೊಂದು ದುಬಾರಿ ವೆಚ್ಚದ ಕಾಮಗಾರಿಗೆ ವ್ಯಾಪಕ ವಿರೋಧವು ವ್ಯಕವಾಗಿದೆ. ಈ ಹಣವನ್ನು ಜನರ ಕಲ್ಯಾಣಕ್ಕಾಗಿ ಅಥವಾ ದೆಹಲಿಯ ವಾಯುಮಾಲಿನ್ಯ ತಡೆಗಟ್ಟಲು ಬಳಸಿಕೊಳ್ಳಬಹುದು ಎಂದು ಟೀಕಾಕಾರು ಸಲಹೆ ಮಾಡಿದ್ದಾರೆ.
ಆದರೆ ಸೆಂಟ್ರಲ್ ವಿಸ್ಟಾ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಎಂದು ಹೇಳುವ ಮೂಲಕ ಟೀಕಾಕಾರರಿಗೆ ಕೇಂದ್ರ ಸಕಾರ ತಿರುಗೇಟು ನೀಡಿದೆ. ಈ ಯೋಜನೆಯಿಂದ ದೊಡ್ಡ ಪ್ರಮಾಣದ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಸಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಹರ್ದೀಪ್ ಸಿಂಗ್ ಪುರಿ ಅವರು ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಯೋಜನೆ ಬಗ್ಗೆ ದೇಶದ ಜನತೆ ಹೆಮ್ಮೆಪಡುತ್ತಾರೆ ಎಂದೂ ಹೇಳಿದ್ದಾರೆ.
ಆದರೆ ಸೆಂಟ್ರಲ್ ವಿಸ್ಟಾ ಮಾದರಿಯ ಹೊಸ ನಿವಾಸ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಶ್ಯಕತೆ ಇದೆಯೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.