ಎಕ್ಸ್ ಪ್ರೆಸ್ ಬಸಗಳಿಗೆ ವಿದ್ಯಾರ್ಥಿಗಳ ಬಸ್ ಪಾಸ್ ನಡೆಸುವಂತೆ : ಯು.ಕ.ರ.ಸೇ ಆಗ್ರಹ

ಕಾಳಗಿ.ಜು.20 : ತಾಲೂಕು ವತಿಯಿಂದ ಇಂದು ಕಾಳಗಿ ಬಸ್ ನಿಲ್ದಾಣದಿಂದ ಬೆಳಗ್ಗೆ ಹೋಗುವ ಕಾಳಗಿ ಹೊಸಪೇಟೆ ಹಾಗೂ ಕಾಳಗಿ ಬಿಜಾಪುರ ವೇಗ ಬಸ್ಸುಗಳು ಹೋಗುತ್ತಿದ್ದು. ವಸ್ತುಗಳಿಗೆ ವಿದ್ಯಾರ್ಥಿಗಳು ಹೋದಲ್ಲಿ ಈ ಬಸ್ಸಿಗೆ ನಿಮ್ಮ ವಿದ್ಯಾರ್ಥಿ ಬಸ್ ಪಾಸ್ ನಡೆಯುವುದಿಲ್ಲವೆಂದು ಹೇಳಿ ಕೆಳಗೆ ಇಳಿಸುವುದು ಮಾಡಿ ವಿದ್ಯಾರ್ಥಿಗಳಿಗೆ ತೊಂದರೆಯನ್ನು ಕೊಡುತ್ತಿರುವುದು ಖಂಡನೆ ವಿಷಯವಾಗಿದೆ ಎಂದು ಯುವ ಕರ್ನಾಟಕ ರಕ್ಷಣಾ ಸೇನೆ ಕಾಳಗಿ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಎರಡು ಬಸ್ಸುಗಳು ಕಲಬುರ್ಗಿಯವರಿಗೆ ಹೋಗುವಾಗ ಹೆಚ್ಚಿನ ಪ್ಯಾಸೆಂಜರ್ ಇರದೇ ಇದ್ದರೂ ಕೂಡ ವಿದ್ಯಾರ್ಥಿಗಳಿಗೆ ಯಾವುದೇ ಸಹಕಾರವನ್ನು ಸಿಗುತ್ತಿಲ್ಲ. ಹಾಗೂ ಕಾಳಗಿ – ಚಿಂಚೋಳಿ ಡೇ ನೈಟ್ ಬಸ್ಸುಗಳು ಮತ್ತು ಕಾಳಗಿಯಿಂದ ಹುಮ್ನಾಬಾದ್ ವರೆಗೆ ಎರಡು ಬಸ್ಸುಗಳು, ಲಾತೂರ್ ಮತ್ತು ತುಳಜಾಪುರ ಬಸ್ಸುಗಳು ಮೊದಲಿನಂತೆ ಓಡಾಡಿಸಿ ಶಾಲಾ-ಕಾಲೇಜಿನ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ಕೂಡಲೇ ಕಾಳಗಿ,- ಹೊಸಪೇಟೆ, ಕಾಳಗಿ – ಬಿಜಾಪುರ್ ಈ ಎರಡು ಬಸ್ಸುಗಳಿಗೆ ಕೂಡಲೇ ವಿದ್ಯಾರ್ಥಿಗಳ ಬಸ್ ಪಾಸ್ ನಡೆಸಿಕೊಳ್ಳುವಂತೆ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಯುವ ಕರ್ನಾಟಕ ರಕ್ಷಣಾ ಸೇನೆ ತಾಲೂಕ ಅಧ್ಯಕ್ಷ ದತ್ತು ಗುತ್ತೇದಾರ, ಉಪಾಧ್ಯಕ್ಷ ಅನಿಲ ಕುಮಾರ ಗುತ್ತೇದಾರ, ಕಾರ್ಯದರ್ಶಿ ಇಬ್ರಾಹಿಂ ಶಾಹಾ, ಗ್ರಾ.ಘ. ಅಧ್ಯಕ್ಷ ಅವಿನಾಶ ಗುತ್ತೇದಾರ, ಚಿತ್ರ ಶೇಖರ ದಂಡೋತಿಕರ್, ಹಣಮಂತ ಉಪ್ಪಿನ್, ರಾಜು ಜಾಧವ ಇದ್ದರು.