ಬಾಂಬೆ ನಟಿಯರನ್ನು ಇಲ್ಲಿಗೆ ಯಾಕೆ ಕರೆಸುತ್ತಾರೆ. ಕನ್ನಡದ ನಟಿಯರು ಬಟ್ಟೆ ಬಿಚ್ಚಿದರೆ, ಎಕ್ಸ್ ಪೋಸ್ ಮಾಡಿದರೆ ತಪ್ಪೇನು…
ಹೀಗಂತ ಟು ಪೀಸ್ ನಲ್ಲಿ ಲಿಪ್ ಟು ಲುಪ್ ಹಸಿ ಬಿಸಿ ಸನ್ನಿವೇಶಗಳಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡ ನಟಿ ರಾಧಿಕಾ ರಾಮ್ ಪ್ರಶ್ನಿಸಿದ್ದಾರೆ.
” ಈ ಪಟ್ಟಣಕ್ಕೆ ಏನಾಗಿದೆ? ” ಚಿತ್ರದ ಪತ್ರಿಕಾಗೋಷ್ಢಿಯಲ್ಲಿ , ಎಕ್ಸ್ ಪೋಸ್ ಬಗ್ಗೆ ಬಿಂದಾಸ್ ಆಗಿ ಮಾತನಾಡಿದ ನಟಿ ರಾಧಿಕಾ ರಾಮ್ ಬಟ್ಟೆ ಬಿಚ್ಚಿದರೆ ತಪ್ಪೇನು. ಬಾಂಬೆ ಇಂದ ಬಂದ ನಟಿಯರು ಜಾಸ್ತಿ ಎಕ್ಸ್ ಪೋಸ್ ಮಾಡಿದರೆ ಅವರನ್ನು ಪ್ರಶ್ನಿಸುವುದಿಲ್ಲ. ಕನ್ನಡದ ನಟಿಯರು ಮಾಡಿದರೆ ಎಕ್ಸ್ ಪೋಸ್ ಜಾಸ್ತಿ ಆಯ್ತು ಅಂತೀರಾ, ಕಥೆಗೆ ಅಗತ್ಯವಿತ್ತು ನಟಿಸಿದ್ದೇನೆ ಎಂದು ತಾನು ಮಾಡಿದ ಕೆಲಸವನ್ನು ಸಮರ್ಥಿಸಿಕೊಂಡರು.
ದೀಪಿಕಾ ಪಡುಕೋಣೆ ಬ್ಯಾಕ್ ಲೆಸ್ ಆಗಿ ಕಾಣಿಸಿಕೊಳ್ಳುವುದು ಸೇರಿದಂತೆ ಎಕ್ಸ್ ಪೋಸ್ ಮಾಡಿದ್ದಾರೆ. ಅವರು ಬೆಂಗಳೂರಿನವರು ಅಲ್ಲಾ ಅವರು ಮಾಡಿದರೆ ನೋಡ್ತೀರಾ ನಾವು ಮಾಡಿದರೆ ಜಾಸ್ತಿ ಆಯ್ತು ಅನ್ನುತ್ತೀರಾ.
ಈಗಿನ ಕಾಲಕ್ಕೆ ಎಕ್ಸ್ ಪೋಸ್ ಅಗತ್ಯವಿದೆ. ಯುವಜನರು ನೋಡ್ತಾರೆ. ಸಮಾಜದಲ್ಲಿ ನಡೆಯುವ ಘಟೆಯನ್ನು ಸಿನಿಮಾರೂಪದಲ್ಲಿ ತರಲಾಗುತ್ತಿದೆ.ಟು ಪೀಸ್ ನಲ್ಲಿ ಕಾಣಿಸಿಕೊಂಡಿರುವುದು, ಹಸಿ ಬಿಸಿ ದೃಶ್ಯಗಳಲ್ಲಿ ಕಾಸಿಕೊಳ್ಳುವುದು ಕಥೆಗೆ ಅನಿವಾರ್ಯವಾಗಿತ್ತು.ಮಾಡಿದ್ದೇನೆ.ಲಿವಿಂಗ್ ರಿಲೇಷನ್ ನಲ್ಲಿ ಇರುವಾಗ ಹುಡುಗ ಕೈ ತಪ್ಪಿ ಹೋಗ್ತಾನೆ ಎನ್ನುವಾಗ ಹುಡುಗಿ ಅವನಿಗೆ ಏನು ಬೇಕೋ ಅದನ್ನು ಕೊಟ್ಟು ಹಿಡಿದಿಟ್ಟು ಕೊಳ್ತಾಳೆ. ಅದೇ ಪಾತ್ರ ನನ್ನದು. ಪರಭಾಷೆಯಲ್ಲಿ ಇದಕ್ಕಿಂತ ಹೆಚ್ಚಾಗಿ ಮಡ್ತಾರೆ.ಕನ್ನಡದಕ್ಕೆ ಜಾಸ್ತಿ ಎನ್ನುತ್ತೀರಾ.ಕನ್ನಡದ ನಟಿಯರು ಎಕ್ಸ್ ಪೋಸ್ ಮಾಡಬಾರದಾ ಎಂದು ಪ್ರಶ್ನಿಸಿದ್ದಾರೆ.
ಹೆಂಡ್ತಿ ಡೈವೋರ್ಸ್ ಕೇಳಿದ್ದಾಳೆ
“ಪಟ್ಟಣಕ್ಕೆ ಏನಾಗಿದೆ” ಚಿತ್ರದಲ್ಲಿ ಜೂಜು, ಮಟ್ಕಾ ಬೆಟ್ಟಿಂಗ್, ಹಸಿ ಬಿಸಿ ದೃಶ್ಯಗಳೂ ಸೇರಿದಂತೆ ಹಲವು ವಿಷಯಗಳಿವೆ. ಒಂದು ಕಾಲದಲ್ಲಿ ನಾನು ಬುಕ್ಕಿ ಆಗಿದ್ದೆ. ಜೂಜಾಡಿದ್ದೇನೆ. ಒಂಥರ ನನ್ನ ಜೀವನದ ಕೆಲ ಭಾಗವೂ ಚಿತ್ರದಲ್ಲಿವೆ ಎಂದು ನಟ,ನಿರ್ದೇಶಕ ರವಿ ಸುಬ್ಬರಾವ್
ಚಿತ್ರವನ್ನು ಆಗಸ್ಟ್ ನಲ್ಲಿ ತೆರೆಗೆ ತರುವ ಉದ್ದೇಶವಿದೆ. ಚಿತ್ರದ ಹಸಿ ಬಿಸಿ ದೃಶ್ಯಗಳು, ವಲ್ಲರ್ ಅನ್ನಿಸಬಗುದಾದ ಸೀನ್ ಗಳನ್ನು ನೋಡಿ ಪತ್ನಿ ಡೈವೋರ್ಸ್ ಕೊಡಿ ಎಂದು ಕೇಳಿದ್ದಾರೆ. ಕಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಬಿಡುಗಡೆಯಾದ ಮೇಲೆನೋಡೋಣ ಎಂದಿದ್ದೇನೆ ಎಂದರು.
ಚಿತ್ರಕ್ಕೆ ಇಲ್ಲಿ ಸೆನ್ಸಾರ್ ಮಾಡಲಿಲ್ಲ. ಬಾಂಬೆ, ಅಲ್ಲಿಂದ ಹೈದರಾಬಾದ್ ನಲ್ಲಿ ಸೆನ್ಸಾರ್ ಮಾಡಿಸಿದ್ದೇವೆ. ‘ ಎ” ಸರ್ಟಿಫಿಕೇಟ್ ನೀಡಿದ್ದಾರೆ. ಅರ್ಧದಷ್ಟು ಸನ್ನಿವೇಶಕ್ಕೆ ಕತ್ತರಿ ಹಾಕಲು ಹೇಳಿದರು. ಮೂರು ಮ್ಯೂಟ್ ನೀಡಿದ್ದಾರೆ ಎಂದರು. ಉಳಿದ ತಂಡ ಮಾಹಿತಿ ನೀಡಿತು