ಎಕ್ಸ್ ಅಂಡ್ ವೈ ಪೋಸ್ಟರ್ ಬಿಡುಗಡೆ

ಡಿ.ಸತ್ಯಪ್ರಕಾಶ್ ನಿರ್ದೇಶಿಸಿ, ಮುಖ್ಯ ಪಾತ್ರದಲ್ಲೂ ಕಾಣಿಸಿಕೊಂಡಿರುವ  ಎಕ್ಸ್ ಅಂಡ್ ವೈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

 ಇವತ್ತಿನ ಜನರೇಷನ್ ಕಥೆ. ಅಪ್ಪ-ಅಮ್ಮ ಆದವರ, ಅಪ್ಪ-ಅಮ್ಮ ಆಗುತ್ತಿರುವವರ, ಅಪ್ಪ –ಅಮ್ಮ ಆಗಬೇಕು ಎಂದುಕೊಂಡವರ ಕಥೆ. ಹಾಗೆಯೇ ಇವತ್ತಿನ ಹುಡುಗ-ಹುಡುಗಿಯರ ಕಥೆ, ಇವತ್ತಿನ ಮಕ್ಕಳ ಕಥೆ.

ಇದೊಂದು ಕಾಮಿಡಿ ಜಾನರ್ ಸಿನಿಮಾ ಆಗಿದ್ದು ಅತಿ ಸೂಕ್ಷ್ಮ ವಿಚಾರಗಳನ್ನು ಅಷ್ಟೇ ಸರಳವಾಗಿ ಅದರಲ್ಲೂ ನಗುನಗುತ್ತಾ ನೋಡುವ ಕಥೆಯಾಗಿ  ಮುಂದೆ ತರುತ್ತಿದ್ದೇವೆ.

ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದೆ.

‌ವಾಸುಕಿ-ವೈಭವ್ ಸಂಗೀತ, ಲವಿತ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನವಿದೆ.

ಅಥರ್ವ ಪ್ರಕಾಶ, ಬೃಂದಾ ಆಚಾರ್ಯ, ಅಯನ, ಸುಂದರ್ ವೀಣಾ, ವೀಣಾ ಸುಂದರ್, ದೊಡ್ಡಣ್ಣ ಹೀಗೆ ಹಿರಿಯ ಮತ್ತು ಹೊಸ ಕಲಾವಿದರ ಸಂಗಮ ಚಿತ್ರದಲ್ಲಿದೆ.

 ಹಿಂದಿನ ಮೂರು ಚಿತ್ರಗಳಿಗೆ ತೋರಿದ ಪ್ರೀತಿ, ತಪ್ಪುಮಾಡಿದಾಗ ‌ ತಿದ್ದಿದ ರೀತಿ, ಸಿನಿಮಾದಲ್ಲೂ ಬೇಕೇ ಬೇಕೆಂಬ ಬೇಡಿಕೆ ನಮ್ಮದು.‌ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಸಹಕಾತವಿರಲಿ ಎಂದಿದ್ದಾರೆ.