ಎಕ್ಸೆಲ್ ಅಕಾಡಮಿಯಿಂದ ಉಚಿತವಾಗಿ ಸಿಇಟಿ ಕೈಪಿಡಿ ವಿತರಣೆ

ಕಲಬುರಗಿ: ಜ.20:ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಖ್ಯಾತಿ ಪಡೆದಿರುವ ಎಕ್ಸೆಲ್ ಅಕಾಡೆಮಿ ವತಿಯಿಂದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಸಿಇಟಿ ಕೈಪಿಡಿಯನ್ನು ಉಚಿತವಾಗಿ ನೀಡುವ ಮೂಲಕ ಸಮಾಜಮುಖಿ ಕಾರ್ಯವನ್ನು ಮಾಡಿದ್ದಾರೆ.

      ಕಾಲೇಜಿನಲ್ಲಿ ಬುಧವಾರ ಉಚಿತವಾಗಿ ಕೈಪಿಡಿ ವಿತರಣೆ ಕಾರ್ಯಕ್ರಮ ಜರುಗಿತು. ಅಕಾಡೆಮಿಯ ದಿಲಿಪಕುಮಾರ, ಪ್ರಾಚಾರ್ಯ ಮಹ್ಮದ್ ಅಲ್ಲಾಉದ್ದೀನ್ ಸಾಗರ, ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಎಚ್.ಬಿ.ಪಾಟೀಲ, ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ಸಿದ್ದಾರೂಡ ಬಿರಾದಾರ, ರಾಮಚಂದ್ರಪ್ಪ ಟಿ.ಹಕ್ಕಿ, ದೇವೇಂದ್ರಪ್ಪ ಬಡಿಗೇರ್, ರಂಜಿತಾ ಠಾಕೂರ್, ಸಮೀನಾ ಬೇಗಂ, ಪ್ರ.ದ.ಸ ನೇಸರ ಎಂ.ಬೀಳಗಿಮಠ ಸೇರಿದಂತೆ ಮತ್ತಿತರಿದ್ದರು.