ಎಕ್ಸಲೆನ್ಸ್ ಶಾಲೆ ಪರವಾನಿಗೆ ರದ್ದಿಗೆ ಭೀಮೇಶ್ ಆಗ್ರಹ

ರಾಯಚೂರು, ಮೇ.೪- ನಗರದಲ್ಲಿರುವ ಅಜಾದ್ ನಗರ ಬಡಾವಣೆಯ ಎಕ್ಸಲೆನ್ಸ್ ಪಬ್ಲಿಕ್ ಕಿರಿಯ ಪ್ರಾಥಮಿಕ ಶಾಲೆಯ ಅನುಮತಿಯನ್ನು ರದ್ದುಪಡಿಸಬೇಕು.ಹಾಗೂ ಮಾನವಿ ತಾಲೂಕಿನ ಕುರ್ಡಿ ಹೋಬಳಿಯಲ್ಲಿ ನಾಡ ತಹಶೀಲ್ದಾರ ಆಗಿ ಕಾರ್ಯನಿರ್ವಹಿಸುತ್ತಿರುವ ಅಬ್ದುಲ್ ರವೂಫ್ ರವರನ್ನು ಸೇವೆಯಿಂದ ವಜಾಗೊಳಿಸಿ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿ ಭೀಮೇಶ್ ವಕೀಲರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದಲ್ಲಿ ಬರುವ ಅಜಾದ ನಗರದ ಬಡಾವಣೆಯ ಎಕ್ಸಲೆನ್ಸ್ ಪಬ್ಲಿಕ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ನು ಮತ್ತು ಭಾರತ ಸಂವಿಧಾನದ ಭಾಗ -೩ ರಲ್ಲಿ ಬರುವ ಅನುಚ್ಛೇಧ ೨೮ ( ೧ ) ಉಲ್ಲಂಘಿಸಿ ದೀ ನಿಯತ್ ವಿಷಯವನ್ನು ಶಾಲೆಯಲ್ಲಿರುವ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಸದರಿ ದೀನಿಯತ್ ವಿಷಯವನ್ನು ಶಾಲೆಯಲ್ಲಿ ಬೋಧಿಸಲು ದೇಶದ ಸಂವಿಧಾನವೆ ಪರವಾನಿಗೆ ನೀಡದಿದ್ದಾಗ ಸಾರ್ವಜನಿಕ ಶಿಕ್ಷಣ ಇಲಾಖೆಯು ದೀನಿಯಸ್ ವಿಷಯವನ್ನು ಭೋಧಿಸಲು ಪರವಾನಿಗೆ ನೀಡಲು ಸಾಧ್ಯವೇ ಇಲ್ಲ ಎಂದು ದೂ?ರಿದರು.
ನಮ್ಮ ದೇಶವು ಧರ್ಮತೀಹ ರಾಷ್ಟ್ರವಾಗಿದ್ದು, ಕೇವಲ ಒಂದು ಧರ್ಮದ ದೀ ನಿಯತ್ ವಿಷಯವನ್ನು ಭೋಧನೆ ಮಾಡುವುದು ಸಂವಿಧಾನ ವಿರೋಧಿ ಚಟುವಟಿಕೆ ಯಾಗಿದೆ. ಭಾರತ ಸಂವಿಧಾನವನ್ನು ಭೋಧನೆ ಮಾಡಬಹುದಾಗಿತ್ತು ? ಆದರೆ ಶಾಲೆಯ ಆಡಳಿತ ಮಂಡಳಿ ಏಕೆ ಮಾಡುತ್ತಿಲ್ಲವೆಂಬುವುದು ಅವರ ಸ್ಪಷ್ಟ ಉದ್ದೇಶ ಕಂಡುಬರುತ್ತದೆ . ಸಹರಾ ಸೇವಾ ಸಂಸ್ಥೆ ಅಜಾದ್ ನಗರ ರಾಯಚೂರು ಕೌನ್ಸಿಲ್‌ನ್ನು ಕರ್ನಾಟಕ ಶಿಕ್ಷಣ ಕಾಯ್ದೆ ೧೯೮೩ ಪರಿಚ್ಛೇದ ೩೧ ರಂತೆ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ -೨೦೦೯ ರಂತೆ ದಿ
೨೦-೦೬-೨೦೧೮ ರಂದು ಶಿಕ್ಷಣ ಸಂಸ್ಥೆಯನ್ನು ನಡೆಸಲು ನೊಂದಾಯಿಸಲಾಗಿದೆ ಸಹರಾ ಸೇವಾ ಸಂಸ್ಥೆ ಬೈಲಾದಲ್ಲಿ ಇರುವ ೧೩ ಉದ್ದೇಶಗಳನ್ನು ಇದರೊಂದಿಗೆ ಲಗತ್ತಿಸಲಾಗಿ ದೆ .ಬೈಲಾದಲ್ಲಿ ತೋರಿಸಿರುವ ಎಲ್ಲಾ ಉದ್ದೇಶಗಳನ್ನು ಹೊರತುಪಡಿಸಿ ಕೇವಲ ಶಿಕ್ಷಣ ಸಂಸ್ಥೆಯನ್ನು ಮಾತ್ರ ವ್ಯಾಪಾರ ಮಾಡಿಕೊಂಡಿದ್ದರೆ ಎಂದು ಆರೋಪಿಸಿದರು.
ಕೂಡಲೇ ಶಾಲೆಯ ಪರವಾನಿಗೆಯನ್ನು ರದ್ದುಗೊಳಿಸಿ ಶಾಲಾ ಆಡಳಿತ ಮಂಡಳಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.ಹಾಗೂ ಮಾನವಿ ತಾಲೂಕಿನ ಕುರ್ಡಿ ಹೋಬಳಿಯ ನಾಡ ತಹಶೀಲ್ ಕಾರ್ಯಾಲಯದಲ್ಲಿ ನಾಡ ತಹಶೀಲ್ದಾರ್‌ರಾಗಿ ಕಾರ್ಯನಿರ್ವಹಿಸುತ್ತಿರುವ ಅಬ್ದುಲ್ ರವೂಫ್ ರವರು ದಿ.೦೩-೦೧ ೨೦೧೨ ರಿಂದ ಇಲ್ಲಿಯವರೆಗೆ ಕರ್ನಾಟಕ ರಾಜ್ಯದ ಕಂದಾಯ ಇಲಾಖೆಯ ಸರಕಾರಿ ನೌಕರನಾಗಿದ್ದು ಇತನು ಸದರಿ ಶಾಲಾ ಆಡಳಿತ ಮಂಡಳಿಯಲ್ಲಿ ಮತ್ತು ಸಹರಾ ಸೇವಾ ಸಂಸ್ಥೆ ಸದಸ್ಯರಾಗಿರುತ್ತಾರೆ . ಇತನು ಸಹರಾ ಸೇವಾ ಸಂಸ್ಥೆಯಲ್ಲಿ ತನ್ನ ವೃತ್ತಿಯನ್ನು ಸರಕಾರಿ ನೌಕರನೆಂದು ತೋರಿಸುವ ಬದಲು ಕೃಷಿ ಎಂದು ನಮೂದಿಸಿದ್ದಾರೆ.ಈತನು ಒಂದು ಕಡೆ ಸಹರಾ ಸೇವಾ ಸಂಸ್ಥೆಯಿಂದ ಕೃಷಿ ಎಂದು ಐ.ಟಿ.ಗೆ ಸುಳ್ಳು ಮಾಹಿತಿ ನೀಡಿದ್ದು.ಮತ್ತೊಂದು ಕಡೆ ಅದೇ ಐ.ಟಿ.ಗೆ ಸರಕಾರಿ ನೌಕರನೆಂದು ವರದಿ ಸಲ್ಲಿಸಿದ್ದಾನೆ . ರಾಜ್ಯ ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಮೋಸ ಮಾಡಿದ್ದು , ಈತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಒಂದು ವೇಳೆ ಇತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ವಿಳಂಬ ಮಾಡಿದ್ದಲ್ಲಿ ನಾನೇ ಖಾಸಗಿ ದೂರನ್ನು ನ್ಯಾಯಾಲಯದಲ್ಲಿ ಮಾಡುವುದಾಗಿ ಎಚ್ಚರಿಸಿದರು.