ಎಕ್ಸಲೆಂಟ್ ಟ್ಯುಟೋರಿಯಲ್‍ನಲ್ಲಿ ಗುರು ಪೂರ್ಣಿಮೆ

ಕಲಬುರಗಿ:ಜು.6:ಗುರು ಪೂರ್ಣಿಮೆ ಅಂಗವಾಗಿ ಎಕ್ಸಲೆಂಟ್ ಟ್ಯುಟೋರಿಯಲ್ಸ್ ಸಂತೋಷ ಕಾಲೋನಿ ಕಲಬುರಗಿ, ಇಲ್ಲಿ ಗುರುವಂದನಾ ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಶ್ರೀಮತಿ.ಮಂಜುಳಾಬಾಯಿ ಮುಖ್ಯ ಅತಿಥಿ, ಶ್ರೀಮತಿ.ಶಾಂತಾಬಾಯಿ, ಶ್ರೀಮತಿ.ರೇಣುಕಾ ರಂಜಳಕರ್, ಶ್ರೀಮತಿ.ಜ್ಯೋತಿ ಬಾಸುತ್ಕರ್, ಶ್ರೀಮತಿ.ಮೀನಾಕ್ಷಿ ಗೌರವ ಅತಿಥಿಗಳಾಗಿದ್ದರು. ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು. ಕಾರ್ಯಕ್ರಮದ ಅಂಗವಾಗಿ ಗುರುವಿನ ಸ್ಮರಣೆ ಮಾಡುತ್ತ ಮೊದಲು ತಾಯಿ ತಂದೆ ಹಾಗೂ ಎರಡನೆಯ ಗುರು ಶಿಕ್ಷಕರ ಪಾದಪೂಜೆ ಮಾಡಿ ಸತ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ.ಮನೋಜ್ ಕುಮಾರ ಬುರಬುರೆ ಹಾಗೂ ವಿಶ್ವರಾಧ್ಯ ಅವರು ತಮ್ಮ ತಾಯಿಯವರ ಮತ್ತು ಗುರುಗಳ ಪಾದಕ್ಕೆ ಪೂಜೆ ಮಾಡಿ ನಮನ ಸಲ್ಲಿಸಲಾಯಿತು.
ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಹಾಗೂ ಶಿಕ್ಷಕರ ಪಾದಗಳಿಗೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮದ ಆರಂಭ 10ನೇ ತರಗತಿಯ ವಿದ್ಯಾರ್ಥಿ ಕುಮಾರ ವಿಜಯ ಸೂರ್ಯನ ಸ್ಡಾಗತ ಭಾಷಣದಿಂದ ಪ್ರಾರಂಭವಾಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ.ಮನೋಜ್ ಕುಮಾರ ಬುರಬುರೆಯವರು ಗುರು ಪೂರ್ಣಿಮೆಯ ಮಹತ್ವವನ್ನು ತಿಳಿಸುತ್ತಾ ಜೀವನದಲ್ಲಿ ವಿದ್ಯೆ ಕಲಿತು ಬೆಳೆದು ದೊಡ್ಡವರಾಗಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಲು ಮೊದಲು ತಂದೆ ತಾಯಿ ಹಾಗೂ ಗುರುಗಳ ಪಾತ್ರ ಅಪಾರವಾದುದು ಹಾಗೂ ಎಲ್ಲರೂ ಸದಾ ಗುರುವಿನ ಸ್ಮರಣೆ ಮಾಡಬೇಕು ಎಂದರು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಉಕ್ತಿಯೊಂದಿಗೆ ತಮ್ಮ ಮಾತುಗಳನ್ನು ಮುಗಿಸಿದರು. ಅಂತಿಮವಾಗಿ 8ನೇ ತರಗತಿ ವಿದ್ಯಾರ್ಥಿ ಕುಮಾರ ಗುರುನಾಥ ವಂದನಾರ್ಪಣೆ ಹೇಳಿದನು. ಕಾರ್ಯಕ್ರಮದ ನಿರೂಪಕರಾದ 10ನೇ ತರಗತಿಯ ವಿದ್ಯಾರ್ಥಿನಿಯಿಂದ ಕುಂಆರಿ.ಶೃಷ್ಟಿ ಹಾಗೂ 7ನೇ ತರಗತಿ ವಿದ್ಯಾರ್ಥಿ ಕುಮಾರ.ಶ್ರೀ ಸಮರ್ಥ ಇವರು ಕಾರ್ಯಕ್ರಮಕ್ಕೆ ಪೂರ್ಣವಿರಾಮ ಕೊಟ್ಟರು.