ಎಕಲಾರ ಪ್ರೌಢ ಶಾಲೆಗೆ ಬಿಇಒ ದಿಢೀರ್ ಭೇಟಿ ಎಸ್ಡಿಎಂಸಿ ಸದಸ್ಯರ ಹಾಗೂ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ

ಔರಾದ್ :ಮಾ.21: ತಾಲೂಕಿನ ಎಕಲಾರ ಸರಕಾರಿ ಪ್ರೌಢ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿಆರ್ ದೊಡ್ಡೆ ಬುಧವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.

ಶಾಲಾ ಆವರಣದ ಪರಿಸರ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಬಿಇಒ ಶಾಲಾ ಚಟುವಟಿಕೆಯಲ್ಲಿ ನಿರತರಾಗಿದ್ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕ್ರಿಯಾಶೀಲತೆ ಕಂಡು ಶ್ಲಾಘನೀಯ ವ್ಯಕ್ತಪಡಿಸಿದರು. ಬುಧವಾರ ಬೆಳಗ್ಗೆ 9:15 ಕ್ಕೆ ಶಾಲೆಗೆ ಭೇಟಿ ನೀಡಿದ ಬಿಇಒ ಟಿಆರ್ ದೊಡ್ಡೆ ಮಕ್ಕಳೊಂದಿಗೆ ಪ್ರಾರ್ಥನೆ ಮಾಡುವ ಮೂಲಕ ಗಮನ ಸೆಳೆದರು. ನಂತರ ಎಸ್ಸೆಸ್ಸೆಲ್ಸಿ ಮಕ್ಕಳ ಶೈಕ್ಷಣಿಕ ಸಮಾಲೋಚನೆ ಮಾಡಿ, ಪರೀಕ್ಷಾ ಸಿದ್ಧತೆಯ ಕುರಿತು ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಬಿಇಒ ಟಿಆರ್ ದೊಡ್ಡೆ, ಎಕಲಾರ ಸರಕಾರಿ ಪ್ರೌಢ ಶಾಲೆ ಜಿಲ್ಲೆಯಲ್ಲಿಯೇ ಮಾದರಿ ಶಾಲೆಯಾಗಿದೆ. ಇಲ್ಲಿಯ ಪೆÇೀಷಕರು, ಎಸ್ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇನ್ನೂ ಶಾಲೆಯ ಶಿಕ್ಷಕ-ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂದವ್ಯವಿದೆ ಎಂದರು. ಬಡ ಮತ್ತು ಮಧ್ಯಮ ವರ್ಗದ ಪೆÇೀಷಕರಿಗೆ ಮಕ್ಕಳ ಭವಿಷ್ಯ ರೂಪಿಸಲು ಸರಕಾರಿ ಶಾಲೆಗಳೇ ನಿಜವಾದ ದೇವಾಲಯಗಳು. ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕಾಗಿದೆ. ಉತ್ತಮ ಪ್ರತಿಭಾವಂತ ಶಿಕ್ಷಕರಿರುವ ಸರಕಾರಿ ಶಾಲೆಗಳಲ್ಲಿ ಆಟ, ಊಟ, ಪಾಠ, ಸಮವಸ್ತ್ರ ಎಲ್ಲವೂ ಸಿಗಲಿದೆ ಎಂದರು.

ಎಸ್ಡಿಎಂಸಿ ಅಧ್ಯಕ್ಷ ಶಿವಕುಮಾರ ಪಾಟೀಲ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಸಾಯಂಕಾಲ ಅಲ್ಪ ಉಪಹಾರದ ವ್ಯವಸ್ಥೆ ಮಾಡಿರುವ ವಿಷಯ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಶಿಕ್ಷಕರು ಒಗ್ಗಟ್ಟಿನಿಂದ ಫಲಿತಾಂಶ ಹೆಚ್ಚಳಕ್ಕಾಗಿ ಶ್ರಮಿಸುತ್ತಿದ್ದು, ರಾತ್ರಿ 9 ಗಂಟೆಯವರೆಗೆ ಅಧ್ಯಾಯನ ಮಾಡಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶಿವಕುಮಾರ ಪಾಟೀಲ್, ಶಾಲೆಯ ಮುಖ್ಯಗುರು ಜಿ.ಬಿ ಪಾಂಚಾಳ, ಶಿಕ್ಷಕರಾದ ಶಿವರಾಜ ಬಿರಾದಾರ್, ಯಶ್ವಂತ ಬಾರೋಳೆ, ಶ್ರೀಮಂತ, ಸುಜಾತಾ, ವಿಜಯಲಕ್ಷ್ಮಿ ಸೇರಿದಂತೆ ಅನೇಕರಿದ್ದರು.