ಎಐಸಿಸಿ ವೀಕ್ಷಕರಾಗಿ ಮುನಿಯಪ್ಪ ನೇಮಕ

ಕೋಲಾರ,ಮಾ.೨೪: ಕೇಂದ್ರ ಸರ್ಕಾರದ ಮಾಜಿ ಸಚಿವರೂ ಹಾಗೂ ಎ.ಐ.ಸಿ.ಸಿಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಹೆಚ್ ಮುನಿಯಪ್ಪ ಅವರನ್ನ, ಕೇರಳ ರಾಜ್ಯ ವಿಧಾನಸಭೆ ಚುನಾವಣೆಯ ಎಐಸಿಸಿ ವೀಕ್ಷಕರನ್ನಾಗಿ ನೇಮಿಸಲಾಗಿದೆ.
ಕೆ.ಹೆಚ್ ಮುನಿಯಪ್ಪ ಅವರು ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ, ಅನೇಕ ರಾಷ್ಟ್ರೀಯ ಮುಖಂಡರ ಜೊತೆಯಲ್ಲಿ ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.