ಎಐಸಿಸಿ ಅಧ್ಯಕ್ಷ ಖರ್ಗೆ ಆಶೀರ್ವಾದ ಪಡೆದ ಕೂಡ್ಲಿಗಿ ಶಾಸಕ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.26 :- ಕೂಡ್ಲಿಗಿ ಕ್ಷೇತ್ರದ ನೂತನ ಶಾಸಕ ಡಾ ಶ್ರೀನಿವಾಸ ಎನ್ ಟಿ  ಗುರುವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡಿ ಅವರ ಆಶೀರ್ವಾದ ಪಡೆದು ಹಿರಿಯರ ಸಲಹೆ ಸೂಚನೆ ಪಡೆದುಕೊಂಡರು.
ಕೂಡ್ಲಿಗಿ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿ  ಮೊದಲ ಬಾರಿ ವಿಧಾನಸಭೆಗೆ ಪ್ರವೇಶ ಪಡೆದು ಶಾಸಕ ಡಾ ಶ್ರೀನಿವಾಸ ಸ್ಥಾನದ ಪ್ರಮಾಣ ವಚನ ಸ್ವೀಕರಿಸಿ ನಂತರ ಪರಿಶಿಷ್ಟ ಪಂಗಡಗಳ ಶಾಸಕರ ಜೊತೆ ದೆಹಲಿ ಪ್ರಯಾಣ ಬೆಳೆಸಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಧ್ಯಕ್ಷರಾದ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ  ನೇರನುಡಿಯ ಫೈರ್ ಬ್ರಾಂಡ್ ಶಾಸಕ ಎಂದೆ ಪ್ರಸಿದ್ದರಾಗಿದ್ದ ಕೂಡ್ಲಿಗಿ ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ಅವರ ಪುತ್ರನೆಂದು ಹೂಗುಚ್ಛನೀಡಿ ಪರಿಚಯಿಸಿಕೊಂಡು ಖರ್ಗೆ ಅವರ   ಆಶೀರ್ವಾದ ಪಡೆದ ಶಾಸಕ ಕೆಲ ನಿಮಿಷ ಕ್ಷೇತ್ರದ ಬಗ್ಗೆ  ಸಂಬಂದಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು ಹಾಗೂ ಹಿರಿಯರಾದ ಖರ್ಗೆ ಅವರ ಸಲಹೆ ಸೂಚನೆ ಪಡೆದುಕೊಂಡರು. 

One attachment • Scanned by Gmail