ಎಐಸಿಸಿ ಅಧ್ಯಕ್ಷರಿಗೆ ಅಭಿನಂದನೆ

ಕೋಲಾರ, ನ,೮: ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನಖರ್ಗೆ ಅವರನ್ನು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟ ಸಮುದಾಯ ನಿಷ್ಟೆ ಹೊಂದಿದೆ, ಈ ಸಮುದಾಯಕ್ಕೆ ರಾಷ್ಟ್ರಮಟ್ಟದ ಗೌರವ ತಮ್ಮಿಂದ ಸಿಕ್ಕಿದ್ದು, ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ತಮ್ಮ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿಮ್ಮ ಆಶೀರ್ವಾದ, ಮಾರ್ಗದರ್ಶನದಂತೆ ಜಿಲ್ಲಾ ಎಸ್ಸಿಘಟಕ ನಡೆಯಲಿದೆ ಎಂದು ತಿಳಿಸಿದರು.
ಜನಾನುರಾಗಿಯಾಗಿ, ಹೈದ್ರಾಬಾದ್ ಕರ್ನಾಟಕ ಜನರ ಆಶಯಗಳನ್ನು ಈಡೇರಿಸಲು ಸಂಕಲ್ಪ ತೊಟ್ಟು ಯಶಸ್ವಿಯಾಗಿರುವ ಖರ್ಗೆಯವರ ಹಿರಿತನ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ್ದು, ರಾಜ್ಯದಲ್ಲಿ ಪಕ್ಷ ಈ ಬಾಗಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಸಿಘಟಕದ ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದರು.