ಎಐಡಿವೈಒ ಸಂಘಟನೆಯ ಪ್ರತಿಭಟನೆಯ ಪೋಸ್ಟರ್ ಬಿಡುಗಡೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ16:  ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ ಇದೆ 18 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಪೋಸ್ಟರ್ ಅನಾವರ್ಣಗೊಳಿಸಲಾಯಿತು.
ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿರುದ್ಯೋಗ, ನೇಮಕಾತಿಯಲ್ಲಿ ಭ್ರಷ್ಟಾಚಾರ ಹಾಲಿ ಖಾಲಿ ಇರುವ ಹುದ್ಧೆಗಳ ಭರ್ತಿಗಾಗಿ ರಾಜ್ಯ ಮಟ್ಟದ ಪ್ರತಿಭಟನೆ ನಡೆಯುತ್ತಿದ್ದು ಈ ಪ್ರತಿಭಟನೆಗೆ ಯುವ ಜನಾಂಗವನ್ನು ಸಂಘಟಿಸುವ ದೃಷ್ಟಿಯಿಂದ ತಮ್ಮ ಬೇಡಿಕೆಯ ಪೋಸ್ಟರ್ ಬಿಡುಗಡೆ ಮಾಡಿದರು.
ಜಿಲ್ಲಾ ಸಮಿತಿಯ ಪ್ರಶಾಂತ, ಪಂಪಾಪತಿ, ಉಮೇಶ್, ಪ್ರಕಾಶ, ಸಮೀರ್, ಕಿರಣ ಪಾಲ್ಗೊಂಡಿದ್ದರು ಎಂದು ಉಪಾಧ್ಯಕ್ಷ ಎರಿಸ್ವಾಮಿ ಹಾಗೂ ಕಾರ್ಯದರ್ಶಿ ಪಂಪಾಪತಿ ತಿಳಿಸಿದರು.