ಎಐಡಿವೈಒ ಸಂಘಟನೆಯಿಂದ ಹುತಾತ್ಮ ದಿನಾಚರಣೆ

ಹೊಸಪೇಟೆ ಮಾ24: ಎಐಡಿಎಸ್‍ಒ ಮತ್ತು ಎಐಡಿವೈಒ ಸಂಘಟನೆಗಳಿಂದ ಜಂಟಿಯಾಗಿ ನಗರದ ವಿವಿಧ ಕಾಲೇಜುಗಳಲ್ಲಿ ಭಗತ್‍ಸಿಂಗ್ ಅವರ 91ನೇ ಹುತಾತ್ಮ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು.
ಎಐಡಿವೈಒ ಸಂಘಟನೆಯ ಪಂಪಾಪತಿ ಮಾತನಾಡಿ, ಭಗತ್ ಸಿಂಗ್, ರಾಜಗುರು, ಸುಖದೇವ್ ಅವರು ಸಮಾಜವಾದಿ ಸಮಾಜದ ಕನಸನ್ನು ಹೊಂದಿದ್ದರು. ವ್ಯವಸ್ಥೆಯ ಬದಲಾವಣೆಯೇ ಕ್ರಾಂತಿ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಡತನ, ನಿರುದ್ಯೋಗ, ಹಸಿವು, ಅಪೌಷ್ಟಿಕತೆ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಸಹಜ ಲಕ್ಷಣಗಳಾಗಿದ್ದು ಇವುಗಳಿಂದÀ ಹೊರಬರುವ ಏಕೈಕ ಮಾರ್ಗ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ತೋರಿಸಿದ ಮಾರ್ಗ ‘ಸಮಾಜವಾದಿ ವ್ಯವಸ್ಥೆ’ ಮಾತ್ರ ಸಾಧ್ಯ ಎಂದರು.
ಎಐಡಿವೈಒನ ಜಿಲಾಧ್ಯಕ್ಷ ಯರಿಸ್ವಾಮಿ, ಎಐಡಿಎಸ್‍ಒನ ಜಿಲ್ಲಾ ಕಾರ್ಯದರ್ಶಿ ರವಿಕಿರಣ್, ಮಂಜುಳಾ, ಪ್ರಕಾಶ್ ನಾಯಕ್, ಗೌಸ್ ಭಾಗವಹಿಸಿದ್ದರು.