ಎಐಡಿಎಸ್‍ಓ 67ನೇ ಸಂಸ್ಥಾಪನಾ ದಿನಾಚರಣೆ

ವಾಡಿ:ಡಿ.31: ಪಟ್ಟಣದಲ್ಲಿ ಆಲ್ ಇಂಡಿಯಾ ಡೆಮಾಕ್ರೆರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‍ಓ) ಸ್ಥಳೀಯ ಸಮಿತಿ ವತಿಯಿಂದ 67ನೇ ಸಂಸ್ಥಾಪನಾ ದಿನವನ್ನು ಪ್ರಸಕ್ತ ರೈತರ ಹೋರಾಟಕ್ಕೆ ಸಮರ್ಪಿಸಿ ಹಲಕರ್ಟಿ ಕಛೇರಿಯಲ್ಲಿ ಸಂಘಟಸಿ ಧ್ವಜಾ ರೋಹಣ ಕಛೇರಿಯಲ್ಲಿ ಧ್ವಜಾರೋಹಣ ಮಾಡಲಾಯಿತು.

ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಸ್ಥಳೀಯ ಸಮಿತಿ ಸದಸ್ಯ ಅರುಣ ಕುಮಾರ ಹಿರೆಬಾನರ್ ರವರು ದೇಶಾದ್ಯಂತ – ಪ್ರಜಾಸತ್ತಾತ್ಮಕ, ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕ ಶಿಕ್ಷಣ ಜಾರಿಗಾಗಿ ಆಗ್ರಹಿಸಿ ಸತತವಾಗಿ ಸುಮಾರು 7 ದಶಕಗಳಿಂದ ಮಹಾನ್‍ಕ್ರಾಂತಿಕಾರಿ ಭಗತ್‍ಸಿಂಗ್, ನೇತಾಜಿ, ಖುದಿರಾಂಬೋಸ್, ಆಜಾದ್ ಹಾಗೂ ಸಮಾಜ ಸುಧಾರಕರಾದ ರಾಜಾರಾಮ್ ಮೋಹನ್‍ರಾಯ್, ಈಶ್ವರಚಂದ್ರ ವಿದ್ಯಾಸಾಗರ, ಜ್ಯೋತಿ ಭಾ ಫುಲೆ, ಮಹಾನ್ ವಿಜ್ಞಾನಿಗಲಾದ ಐನ್‍ಸ್ಟೀನ್, ಮೇಡಂ ಕ್ಯೂರಿ ಸೇರಿದಂತೆ ಹಲವಾರು ಮಹಾನ್ ವ್ಯಕ್ತಿಗಳ ಜೀವನಾಧಾರಗಳನ್ನು ಎತ್ತಿ ಹಿಡಿದು ಮೌಲ್ಯಾಧಾರಿತ ಜಾರಿಗಾಗಿ ಹೋರಾಟಗಳನ್ನು ಬೆಳೆಸುತ್ತಾ ಬಂದಿದೆ.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಮಿಸಿದ ಎಸ್.ಯು.ಸಿ.ಐ.ಸಿ. ಸ್ಥಳೀಯ ಕಾರ್ಯದರ್ಶಿಗಳು ಕಾ. ವೀರಭದ್ರಪ್ಪ ಆರ್.ಕೆ. ರವರು ಸ್ವತಂತ್ರ್ಯ ನಂತರ ಅಧಿಕಾರದ ಗದ್ದುಗೆ ಏರಿದ ಎಲ್ಲಾ ಸರಕಾರಗಳು ಶಿಕ್ಷಣದ ಅನುದಾನವನ್ನು ಕ್ರಮೇಣವಾಗಿ ಕಡಿತಗೊಳಿಸಿ ಶಿಕ್ಷಣವನ್ನು ಖಾಸಗೀಕರಣಗೊಳಿಸಿ ಕಡ್ಡಾಯ ಮತ್ತು ಉಚಿತ ಶಿಕ್ಷಣದಿಂದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿಸುತ್ತೇವೆ. ಆ ಮೂಲಕ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಕೂಡಾ ಇದಕ್ಕೆ ಹೊರತಾಗಿಲ್ಲ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಅಧ್ಯಕ್ಷತೆ ಸ್ಥಳೀಯ ಸದಸ್ಯರಾದ ದತ್ತಾತ್ರೇಯ ಹುಡೇಕರ್ ವಹಿಸಿದರು . ಪ್ರಾಸ್ಥವಿಕವಾಗಿ ಗೋವಿಂದ ಹೇಳವರ ಮಾತನಾಡಿದರು. ಈ ಸಂಧರ್ಬದಲ್ಲಿ ಸ್ಥಳೀಯ ಅಧ್ಯಕ್ಷ ಗೌತಮ್ಮ ಪರ್ತುರ್ಕರ್, ಕಾರ್ಯದರ್ಶಿಗಳು ವೆಂಕಟೇಶ ದೇವದುರ್ಗ, ಸದಸ್ಯರಾದ ಪ್ರಕಾಶ ಪೂಜಾರಿ, ಮರಲಿಂಗ, ಸಿದ್ದಾರ್ಥ, ಸಿದ್ದು ಮದ್ರಿ, ಇನ್ನು ಹಲವಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.