ಎಐಡಿಎಸ್‍ಒ ಪ್ರತಿಭಟನೆ

ಕಲಬುರಗಿ ಏ 3: ಪದವಿ 5 ನೆಯ ಮತ್ತು 6 ನೆಯ ಸೆಮಿಸ್ಟರ್ ಪರೀಕ್ಷೆ ಬರೆಯಲು 1 ನೆಯ ಮತ್ತು 2 ನೆಯ ಸೆಮಿಸ್ಟರ್ ನ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು ಎಂಬ ಗುಲಬರ್ಗವಿಶ್ವವಿದ್ಯಾಲಯ ಹೊರಡಿಸಿದ ಸುತ್ತೋಲೆ ವಿರೋಧಿಸಿ ಇಂದು ಎಐಡಿಎಸ್‍ಒ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈಗಾಗಲೇ ಎಲ್ಲ ವಿದ್ಯಾರ್ಥಿಗಳು ಫೀಸು ತುಂಬಿ ಪರೀಕ್ಷೆಗೆ ಸಿದ್ಧರಾಗಿದ್ದಾರೆ.ಇಂತಹ ಸಂದರ್ಭದಲ್ಲಿ ಈ ಸುತ್ತೋಲೆ ಹೊರಡಿಸಿದ್ದು ಎಷ್ಟು ಸರಿ ? ಅವೈಜ್ಞಾನಿಕವಾದ ಈ ನಿಯಮವನ್ನು ಕೂಡಲೇ ಕೈ ಬಿಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಹಣಮಂತ ಎಸ್ ಎಚ್,ಈರಣ್ಣ ಇಸಬಾ,ಸ್ನೇಹಾ ಕಟ್ಟಿಮನಿ,ಶಿಲ್ಪಾ ಬಿಕೆ,ನಾಗರಾಜ,ಭೀಮು,ವೆಂಕಟೇಶ ಸೇರಿದಂತೆ ಹಲವರು ಪಾಲ್ಗೊಂಡರು