ಎಐಡಿಎಸ್‌ಓ: ೬೭ ನೇ ಸಂಸ್ಥಾಪನಾ ದಿನ-ಧ್ವಜಾರೋಹಣ

ರಾಯಚೂರು.ಡಿ.೨೮- ೬೭ನೇ ಸಂಸ್ಥಾಪನಾ ದಿನದ ಪ್ರಯುಕ್ತ ಧ್ವಜಾರೋಹಣ ಮತ್ತು ಕಾರ್ಯಕರ್ತರು, ವಿದ್ಯಾರ್ಥಿಗಳೊಂದಿಗೆ ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು.
ಂIಆSಔ ರಾಜ್ಯ ಉಪಾಧ್ಯಕ್ಷರಾದ ಮಹೇಶ್ ಚೀಕಲಪರವಿ ರವರು ಧ್ವಜಾರೋಹಣವನ್ನು ನೆರೆವೇರಿಸಿದರು. ನಂತರ ವಿದ್ಯಾರ್ಥಿಗಳನದನ್ನು ಉದ್ದೇಶಿಸಿ ಈ ಕೆಳಗಿನಂತೆ ಮಾತನಾಡಿದರು, “ಮಹಾನ್ ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್ ಹಾಗೂ ಇನ್ನಿತರ ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ ದೊರಕಿ ೭೩ ವರ್ಷಗಳಾದರೂ ಸಹ, ಅವರು ಕಂಡ ಸ್ವತಂತ್ರ ಭಾರತದ ಕನಸು ಕನಸಾಗಿಯೇ ಉಳಿದಿದೆ.
ಇಂದಿಗೂ ದೇಶದಲ್ಲಿ ಶಿಕ್ಷಣವು ಖಾಸಗೀಕರಣ, ವ್ಯಾಪಾರೀಕರಣದ ಬೃಹತ್ ಗೂಡಾಗಿದೆ.ಯಾವುದೇ ಬೇಧ-ಭಾವವಿಲ್ಲದೇ ಒಂದೇ ರೀತಿಯ ಶಿಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗುವುದು ಅಸಾಧ್ಯದ ಮಾತಾಗಿದೆ.. ಬಡವರು ತಮ್ಮ ಮಕ್ಕಳಿಗೆ ಒಳ್ಳೆ ಗುಣಮಟ್ಟದ ಶಿಕ್ಷಣ ಕೊಡಿಸಲು ಅನುಭವಿಸುವ ಪರದಾಟ ಹೇಳತೀರದು. ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣಕ್ಕೆ ಅಂತ್ಯ ಹಾಡುವುದಾಗಿ ಹೇಳುವ ಸರ್ಕಾರಗಳೇ ಅಂದಿನಿಂದ ಇಂದಿನವರೆಗೂ ಶ್ರೀಮಂತ ಮನೆತನಗಳ ಪರವಾದ ದನಿಯಾಗಿ, ಅವರ ಪ್ರಯೋಜನಕ್ಕೆ ತಕ್ಕ ನೀತಿಗಳನ್ನು ರೂಪಿಸುತ್ತಲೇ ಬಂದಿದ್ದಾರೆ.
ಇದರ ಪರಿಣಾಮವಾಗಿ ಕೂಲಿ ಕಾರ್ಮಿಕರು, ರೈತರು, ಮಧ್ಯಮ ವರ್ಗದವರ ಮಕ್ಕಳು ಶಿಕ್ಷಣದಿಂದ ವಂಚಿರಾಗುತ್ತಿದ್ದಾರೆ.. ಸರ್ಕಾರದ ಈ ಉದ್ದೇಶದ ವಿರುದ್ಧ ಹಾಗೂ ನೈಜ ಪ್ರಜಾಸತ್ತಾತ್ಮಕ, ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಂತಹ ಶಿಕ್ಷಣದ ಅವಶ್ಯಕತೆ ಇರುವುದನ್ನು ಮನಗಂಡು, ಈ ಉದ್ದೇಶವನ್ನು
ಸಾಕಾರಗೊಳಿಸಬೇಕೆಂದು ಹಾಗೂ ಮಹಾನ್ ಸ್ವಾತಂತ್ರ ಹೋರಾಟಗಾರರು ಕಂಡ ಕನಸಿನ ಭಾರತ ನಿರ್ಮಿಸಿ ಎಲ್ಲರಿಗೂ ಶಿಕ್ಷಣ, ಉದ್ಯೋಗ ಹಾಗೂ ಭದ್ರತೆಯನ್ನು ಖಾತ್ರಿ ಪಡಿಸಬೇಕೆಂದು ನಮ್ಮ ವಿದ್ಯಾರ್ಥಿ ಸಂಘಟನೆಯ ಎಐಡಿಎಓ ಕಳೆದ ಸುಮಾರು ೭ ದಶಕಗಳಿಂದ ಸತತವಾಗಿ ಎಲ್ಲಾ ಸರ್ಕಾರಗಳು ತಂದಿರುವ ವಿದ್ಯಾರ್ಥಿ ವಿರೋಧಿ – ಜನ ವಿರೋಧಿ ಕಾಯ್ದೆಗಳ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದೆ.
ಇಂದಿಗೆ ಎಐಡಿಎಓ ಸ್ಥಾಪನೆಯಾಗಿ ೬೭ ವರ್ಷಗಳು ತುಂಬಿವೆ.. ಈ ಹಿನ್ನೆಲೆಯಲ್ಲಿ ಇಂದು ದೇಶದಾದ್ಯಂತ ಸಂಸ್ಥಾಪನಾ ದಿನದ ಕುರಿತು ವಿದ್ಯಾರ್ಥಿಗಳ ನಡುವೆ ಗುಂಪು ಚರ್ಚೆ, ಬೀದಿಬದಿ ಸಭೆ, ಆನ್ಲೈನ್ ಚರ್ಚೆಗಳ ಮೂಲಕ ಸಂಸ್ಥಾಪನಾ ದಿನವನ್ನು ಆಚರಸಲಾಗುತ್ತಿದೆ ನಗರದ ಗಾರ್ಡನ್ ಗಳಲ್ಲಿ ನಾಳೆ ಬೆಳಗ್ಗೆ ಪ್ರಚಾರ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಪೀರ್ ಸಾಬ್ ಹಾಗೂ ಕಾರ್ತಿಕ್, ಹೇಮಂತ್, ಬಸವರಾಜ, ಆಮೋಘ, ಅಂಕಿತಾ, ಲಖ್ಖನ್, ಅಶೋಕ ಮುಂತಾದವರು ಉಪಸ್ತಿತರಿದ್ದರು.