ಎಐಟಿಯುಸಿ ಶತಮಾನೋತ್ಸವ;ಪೂರ್ವಭಾವಿ ಸಭೆ

ದಾವಣಗೆರೆ.ನ.೪; ಮುಂಬರುವ ನವೆಂಬರ್ ೨೨ ರಂದು ನಡೆಯಲಿರುವ ಎಐಟಿಯುಸಿ ಶತಮಾನೋತ್ಸವ ರಾಜ್ಯಮಟ್ಟದ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ನಗರದ ಪಂಪಾಪತಿ ಭವನದಲ್ಲಿ ನಡೆಸಲಾಯಿತು.ಇದೇ ವೇಳೆ ಜಿಲ್ಲೆಯ ವಿವಿಧ ತಾಲೂಕು ಮಟ್ಟದಲ್ಲಿ ಶತಮಾನೊತ್ಸವ ಕಾರ್ಯಕ್ರಮ ಆಚರಿಸಲಾಗುವುದೆಂದು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಎಐಟಿಯುಸಿ ರಾಜ್ಯಾಧ್ಯಕ್ಷ ಕಾಂ.ಎಚ್.ಕೆ.ರಾಮಚಂದ್ರಪ್ಪ, ಕಾರ್ಮಿಕ ಮುಖಂಡರುಗಳಾದ ಆವರಗೆರೆ ಉಮೇಶ್, ಆವರಗೆರೆ ಚಂದ್ರು , ಆವರಗೆರೆ ವಾಸು, ಮಹಮ್ಮದ್ ಭಾಷಾ, ರಫೀಕ್, ಆನಂದರಾಜ್, ಶಾರದಮ್ಮ, ವಿಶಾಲಾಕ್ಷಿ, ಜ್ಯೋತಿ, ರಂಗನಾಥ್, ದಾದಾಪೀರ್, ಮಂಜಪ್ಪ ಸೇರಿದಂತೆ ಕಾರ್ಮಿಕರು ಭಾಗವಹಿಸಿದ್ದರು.