ಎಐಟಿಯುಸಿ ಜಿಲ್ಲಾ ಸಮಿತಿಗೆ ನೇಮಕ

ದಾವಣಗೆರೆ.ಜೂ.೧೧; ದಾವಣಗೆರೆ ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷರನ್ನಾಗಿ ಕಾಂ ರಾಘವೇಂದ್ರ ನಾಯರಿ ರವರನ್ನು ಆಯ್ಕೆಮಾಡಲಾಗಿದೆ ಎಂದು ಎಐಟಿಯುಸಿ ಜಿಲ್ಲಾ ಸಮಿತಿ ಖಜಾಂಚಿಗಳಾದ ಕಾಂ ಆನಂದ ರಾಜ್ ರವರು ತಿಳಿಸಿದ್ದಾರೆ.ಮತ್ತು ಎಐಟಿಯುಸಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯನ್ನಾಗಿ
ಕಾಂ ಹೆಚ್ ಜಿ ಉಮೇಶ್ ರವರನ್ನು ಆಯ್ಕೆಮಾಡಲಾಯಿತು.ಇಲ್ಲಿನ ಅಶೋಕ ರಸ್ತೆಯಲ್ಲಿರುವ ಕಾಂ ಪಂಪಾಪತಿ ಭವನದಲ್ಲಿ ನಡೆದ ಸಭೆಯಲ್ಲಿ ಸರ್ವಸಮ್ಮತ ರಿಂದ ಈ ಆಯ್ಕೆ ಮಾಡಲಾಯಿತು. 
ಸಭೆ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಾರ್ಮಿಕ ಮುಖಂಡರು ಎಐಟಿಯುಸಿ ಜಿಲ್ಲಾ ಸಮಿತಿ ಖಜಾಂಚಿ ಗಳಾದ ಕಾಮ್ರೇಡ್ ಆನಂದರಾಜ್ ರವರು ಮಾತನಾಡಿ ಎಐಟಿಯುಸಿ ನೇತೃತ್ವದಲ್ಲಿ ಇನ್ನೂ ಹಲವಾರು ದುಡಿಯುವ ವರ್ಗದ ಕಾರ್ಮಿಕರನ್ನು ಸಂಘಟಿಸಿ ಅವರಿಗೆ ನ್ಯಾಯ ದೊರಕಿಸಿಕೊಡಲು ಎಲ್ಲರೂ ಸೇರಿ ಶ್ರಮಿಸಬೇಕು ಎಂದರು. 
 ಸಭೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ನೂತನ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು , ಕಾಂ ಸುರೇಶ್ ಕಾಂ ಶೇಖರಪ್ಪ ಕಾಂ ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣಾಭಿವೃದ್ದಿ ಟ್ರಸ್ಟ್ ನ ಅಧ್ಯಕ್ಷರಾದ ಕಾಂ ಟಿ ಎಸ್ ನಾಗರಾಜ್ , ಮುಖಂಡರುಗಳಾದ ಕಾಂ ಕೆ ಜಿ ಶಿವಮೂರ್ತಿ , ಕಾಂ ಎಂ ಬಿ ಶಾರದಮ್ಮ , ಕಾಂ ಮಹಮದ್ ಬಾಷಾ ,ಕಾಂ ಆವರಗೆರೆ ವಾಸು , ಕಾಂ ಎನ್ ಟಿ ಬಸವರಾಜ್ , ಕಾಂ ಜಿ ಯಲ್ಲಪ್ಪ ,ಕಾಂ ಟಿ ಈ ತಿಪ್ಪೇಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.