ಎಎಸ್‍ಪಿ ಶುವಾಂಶು ರಜಪುತ್ ನೇತೃತ್ವದಲ್ಲಿ ರೌಡಿ ಶೀಟರ್ ಪರೇಡ್

ಹುಮನಾಬಾದ್ :ಜು.17:ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಶನಿವಾರ ಚಿsಠಿ ಶಿವಾಂಶು ರಜಪುತ ನೇತೃತ್ವದಲ್ಲಿ ರೌಡಿಗಳ ಶೀಟರ್ ಪರೇಡ್ ನಡೆಯಿತು.

ಎಎಸ್ ಪಿ ಶಿವಾಂಶು ರಜಪುತ ಮಾತನಾಡಿ, ಯಾರು ಕೂಡ ಅಪರಾಧ ಪ್ರಕರಣದಲ್ಲಿ ಭಾಗಿಯಾಗಬಾರದು. ಒಂದುವೇಳೆ ಮತ್ತೆ ದುಷ್ಕøಕೃತ್ಯ ಎಸಗಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆ ಎಸಗಿದ ಅಪರಾಧಕ್ಕೆ ಸಂಬಂಧಿಸಿದಂತೆ ಕೆಲವರು ಶಿಕ್ಷೆ ಎದುರಿಸಿದ್ದೀರಿ, ಕೆಲವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು.

ಸಾಮಥ್ರ್ಯಕ್ಕೆ ತಕ್ಕುದಾದ ಕೆಲಸ ಮಾಡಿ ಸಮಾಜದಲ್ಲಿ ಜೀವನ ನಡೆಸಬೇಕು ಎಂದು ಹೇಳಿದರು.
ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್‍ಐ ಮಂಜನಗೌಡ ಪಾಟೀಲ್, ಸಂಚಾರಿ ಪಿಎಸ್‍ಐ ಬಸವರಾಜ ಹೇರೂರ, ಮಲ್ಲು ಮಳ್ಳಿ, ವಿಜಯಕುಮಾರ ಮೇಟಿ, ಆಕಾಶ ಸಿಂಧೆ, ಶಿವು ಸೀತಾಳಗೇರಾ, ಭಗವಾನ ಬಿರಾದಾರ, ಸೇರಿದಂತೆ ತಾಲೂಕಿನ ವಿವಿಧಡೆಯ ರೌಡಿಗಳು ಇದ್ದರು.