ಎಎಸ್ಐ ಅಬ್ಬಾಸ್ ಅಲಿ ಕೊರೊನಾಗೆ ಬಲಿ

ಕಲಬುರಗಿ:ಏ.29: ನಗರದ ರೋಜಾ ಪೊಲೀಸ್ ಠಾಣೆಯ ಎಎಸ್ಐ ಅಬ್ಬಾಸ್ ಅಲಿ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ‌.
ಕಳೆದ ಕೆಲ ದಿನಗಳಿಂದ ಕೊರೊನಾ‌ ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕಳೆದ ರಾತ್ರಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಅಬ್ಬಾಸ್ ಅಲಿ ಅಗಲಿಕೆಗೆ ಇಲಾಖೆಯ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.
ಪೊಲೀಸ್ ಇಲಾಖೆಯಿಂದ ಅಂತಿಮ ನಮನ:ಇಲಾಖೆಯ ನಿಯಮಾವಳಿ ಪ್ರಕಾರ ನಿಧನರಾದ ಎಎಸ್ಐ ಅಬ್ಬಾಸ್ ಅಲಿ ಅವರಿಗೆ ಗೌರವ ವಂದನೆಗಳೊಂದಿಗೆ ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು.